ಚುನಾವಣೆ ಸೋತರೆ ಸರ್ಕಾರ ಪತನ ಖಚಿತ: ಸಿದ್ದು

ತಮ್ಮ ಪಕ್ಷ ಮುಖ್ಯಮಂತ್ರಿಗಳನ್ನು ಸೋಲಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದ್ದು, ಶ್ರೀರಾಮುಲು ಅವರ ಬಂಡಾಯ ಮತ್ತು ಅವರ ಬೆಂಬಲಿಗರಾದ 22 ಬಿಜೆಪಿ ಶಾಸಕರ ಪಾತ್ರ ಸರ್ಕಾರವನ್ನು ಉರುಳಿಸಲಿದೆ ಎಂದು ಹೇಳಿದ್ದಾರೆ.
ದೆಹಲಿಗೆ ಹೋಗಿ ಬಂದ ಮೇಲೆ ಯಡಿಯೂರಪ್ಪ ಅವರು ಸದಾನಂದ ಗೌಡರ ತಲೆ ಮೇಲಿಟ್ಟಿದ್ದ ಅಭಯ ಹಸ್ತವನ್ನು ತೆಗೆದಿದ್ದಾರೆ. ಹೀಗಾಗಿ ಸದಾನಂದ ಗೌಡರಿಗೆ ಸೋಲು ಖಚಿತ.
ಒಂದು ವೇಳೆ ಸರ್ಕಾರ ಪತನವಾದರೆ, ರಾಷ್ಟ್ರಪತಿ ಆಳ್ವಿಕೆ ಅಥವಾ ಚುನಾವಣೆಗಳನ್ನು ಎದುರಿಸಬೇಕಾಗಬಹುದು ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
ಶ್ರೀರಾಮುಲು ಕಾಂಗ್ರೆಸ್ ಅರ್ಭ್ಯರ್ಥಿಗೆ ಬೆಂಬಲಿಸಿದ ಮಾತ್ರಕ್ಕೆ ಅಕ್ರಮ ಗಣಿಗಾರಿಕೆ ವಿರುದ್ಧದ ಕಾಂಗ್ರೆಸ್ ನಿಲುವು ಬದಲಾಗುವುದಿಲ್ಲ. ಎಸ್ ಎಂ ಕೃಷ್ಣ ಅವರ ಬಗ್ಗೆ ಬಂದಿರುವ ಆರೋಪದಲ್ಲಿ ಹುರುಳಿಲ್ಲ. ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಲೋಕಾಯುಕ್ತ ನೇಮಕಾತಿ ವಿಷಯದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಸರ್ಕಾರ, ಬನ್ನೂರು ಮಠ ಅವರನ್ನೇ ಲೋಕಾಯುಕ್ತರನ್ನಾಗಿ ನೇಮಿಸಲು ಪಟ್ಟುಹಿಡಿದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications