ಅಕ್ಕಪಕ್ಕ ಸೀಟಿನಲ್ಲಿ ದಿಲ್ಲಿಗೆ ತೆರಳಿದ ಯಡ್ಡಿ-ಕುಮ್ಮಿ ಮಾತ್ನಾಡಿಕೊಂಡಿದ್ದೇನು?

ಸರಿ. ದಿಲ್ಲಿ ಪ್ರಯಾಣ ಅಂದರೆ ಅದು ಮೂರು ಗಂಟೆ ಇಂಚುಮುಂಚು ಪ್ರಯಾಣ. ಹಾಗಾದರೆ ಈ ಮಾ.ಮು.ಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಎಚ್.ಡಿ. ಕುಮಾರಸ್ವಾಮಿ ಏನೆಲ್ಲ ಮಾತನಾಡಿಕೊಂಡರು. ಅಥವಾ ರಾಜಕೀಯದಾಟದಲ್ಲಿ ಸೆಟೆದುಕೊಂಡು ವಿಮುಖರಾಗಿಯೇ ಪ್ರಯಾಣ ಬೆಳೆಸಿದರಾ!? ಮೊದಲು ಕಣ್ಣು ಮೀಟಿದ್ದು ಯಾರು?
ಯಡ್ಡಿ ಬೇಡಿಕೆಗೆ ಕುಮಾರಣ್ಣ ತೂಕಡಿಕೆ!: ಇದಕ್ಕೆಲ್ಲ ಉತ್ತರವೆಂಬಂತೆ ಪರಸ್ಪರ ಮುಗುಳ್ನಗೆಯೊಂದಿಗೆ ರಾಜಧಾನಿ ಪ್ರಯಾಣ ಆರಂಭಿಸಿದ್ದಾರೆ. ಆದರೆ ಸನ್ಮಾನ್ಯ ಯಡಿಯೂರಪ್ನೋರು 'ಹೊಸ ರಾಜಕೀಯ ಪ್ರಯಾಣ ಆರಂಭಿಸೋಣವಾ ಬ್ರದರ್? ಎಂದು ಕುಮ್ಮಿಗೆ ಗುಮ್ಮಿದ್ದಾರೆ. '
ಇನ್ನು ಮೇಲಾದ್ರೂ ಆರಾಮಾಗಿ ಇರೋಣ. ದ್ವೇಷ ಬೇಡ' ಎಂದು ಕುಮಾರಸ್ವಾಮಿ ಎದುರು ಬೇಡಿಕೆಯಿಟ್ಟಿದ್ದಾರೆ. ಅದೇ ಉಸುರಿನಲ್ಲಿ 'ಕುಮಾರಣ್ಣಾ, ಸದಾನಂದಗೌಡರಿಗೇ ಬೆಂಬಲ ಕೊಡಣ್ಣಾ' ಎಂದೂ ಅಲವತ್ತುಕೊಂಡಿದ್ದಾರೆ.
ಆದರೆ ಯಡಿಯೂರಪ್ನೋರ ಈ ಬೇಡಿಕೆಗೆ ಕುಮಾರಣ್ಣನ ತೂಕಡಿಕೆ ಉತ್ತರವಾಗಿದೆ. ಸಿಟ್ಟಿಗೆದ್ದ ಯಡ್ಡಿ 'ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ ...ನನ್ನ ತಮ್ಮಾ' ಎಂದು ತಿವಿದಿದ್ದಾರೆ. ಅದೇ ಮುನಿಸಿನಿಂದ 'ಏನ್ ನನ್ಜತೆ ಮಾತನಾಡಲಾರದಷ್ಟು ತೂಕಡಿಕೆಯಾ? ಅಥವಾ ಮುನಿಸಾ...' ಎಂದು ತಿವಿದಿದ್ದಾರೆ. ಕುಮಾರಣ್ಣ ಮಾತ್ರ ಬಿಲ್ಕುಲ್ ಅಲುಗಾಡಿಲ್ಲ!
ಅಂದಹಾಗೆ, ಡಿ. 13ರಂದು ಇಬ್ಬರೂ ಮಾಜಿ ಮುಖ್ಯಮಂತ್ರಿಗಳಿಗೆ ಈ ಸುಯೋಗ ಒದಗಿ ಬಂದಿತ್ತು. ಇಬ್ಬರೂ ಇನ್ನೂ ದಿಲ್ಲಿಯಲ್ಲೇ ಇದ್ದಾರೆ. ವಾಪಸ್ ಪ್ರಯಾಣದಲ್ಲಿ ಏನೆಲ್ಲ ಆಗುತ್ತದೆ!? 'ದಟ್ಸ್ ಕ್ನನಡ' ನೋಡುತ್ತಿರಿ.












Click it and Unblock the Notifications