ಮಾಜಿ ಸಿಎಂಗಳಿಂದ ಅಕ್ರಮ ಗಣಿ ನೂರಕ್ಕೆನೂರು ನಿಜ

ಈ ಮಧ್ಯೆ, ಮೂವರು ಮಾಜಿ ಮುಖ್ಯಮಂತ್ರಿಗಳ ಪೈಕಿ ಇಬ್ಬರು ಪ್ರಕರಣದ ವಿಚಾರಣೆಯನ್ನು ರದ್ದುಪಡಿಸುವಂತೆ ಕೋರಿ ರಾಜ್ಯ ಹೈಕೋರ್ಟಿಗೆ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ಬಗ್ಗೆ ಕೋರ್ಟ್ ಇಂದು ತೀರ್ಪು ನೀಡಲಿದೆ.
ಅರಣ್ಯ ಮತ್ತು ಗಣಿ ಕಾಯ್ದೆಗಳನ್ನು ಉಲ್ಲಂಘಿಸಿ ಎಸ್.ಎಂ. ಕೃಷ್ಣ ನೇತೃತ್ವದ ಸಚಿವ ಸಂಪುಟ ಸುಮಾರು 15 ಸಾವಿರ ಚದರ ಕಿ.ಮೀ. ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಡೆಕ್ಕನ್ ಮೈನಿಂಗ್ ಸಿಂಡಿಕೇಟ್‌ಗೆ ಅನುಮತಿ ನೀಡಿತ್ತು. ಇದೇ ಡಿಎಂಸಿ ಕಂಪನಿ ಸರಕಾರಿ ಸ್ವಾಮ್ಯದ ಎನ್‌ಎಂಡಿಸಿ ಕಂಪನಿಗೆ ಸೇರಿದ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಇಷ್ಟೆಲ್ಲಾ ಆದ ಮೇಲೂ ಕೃಷ್ಣ ಅವರು ನಾನು ಯಾವುದೇ ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿಲ್ಲ ಎಂದು ಸಮರ್ಥಿಸಿಕೊಳ್ಳುವುದು ಆಶ್ಚರ್ಯ ಮೂಡಿಸಿದೆ.
ಅದೇ ರೀತಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವಧಿಯ ಅಕ್ರಮ ಗಣಿಗಾರಿಕೆ ವಿಷಯವಾಗಿ 23 ಕೋಟಿ ರೂ. ನಷ್ಟ ವಸೂಲಿಗೆ ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಾಜಕೀಯ ಪ್ರಭಾವ ಬಳಸಿ ಅವರು ಸದ್ಯಕ್ಕೆ ಬಚಾವ್ ಆಗಿರಬಹುದು. ಆದರೆ, ತಪ್ಪಿಗೆ ಮುಂದೊಂದು ದಿನ ದಂಡ ತೆರಲೇಬೇಕಾಗುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಕ್ರಮ ಗಣಿಗಾರಿಕೆಗೆ ಎಲ್ಲ ಅನುಕೂಲ ಮಾಡಿಕೊಟ್ಟಿದ್ದರು. ವಿಜಯ ಗೋಯಲ್‌ಗೆ ಸೇರಿದ ಅದಿರು ಕಂಪನಿಗಳಿಗೆ ಸಹಕಾರ ತೋರಿದ್ದಾರೆ. ಅದೇ ರೀತಿ ದೇವೇಗೌಡರ ಕುಟುಂಬ ಪಾಲುದಾರಿಕೆಯ ಬಿಎಸ್‌ಕೆ ಟ್ರೇಡಿಂಗ್ ಕಂಪನಿ ಲಕ್ಷಾಂತರ ಟನ್ ಅದಿರು ರಫ್ತು ಮಾಡಿದೆ ಎಂದು ಆರೋಪಿಸಿದರು.
ಅಕ್ರಮ ಗಣಿಗಾರಿಕೆ ಕುರಿತಂತೆ ಸುಪ್ರೀಂಕೋರ್ಟ್‌ನ ಅರಣ್ಯ ಪೀಠದಲ್ಲಿ ಸಲ್ಲಿಸಲಾಗಿರುವ ಅರ್ಜಿ ಹೊರತುಪಡಿಸಿ ಇತರೆ ವಿಷಯಗಳ ಬಗ್ಗೆ ಮತ್ತೂಂದು ಅರ್ಜಿ ಸಲ್ಲಿಸಲು ಚಿಂತಿಸಲಾಗುತ್ತಿದೆ ಎಂದು ಅವರು ಹೇಳಿದರು.












Click it and Unblock the Notifications