ವಾಹನ ಹಾಯ್ದು ಬಾಲಕರು ಸೇರಿ ಮೂವರ ಸಾವು
ಯಾದಗಿರಿ,
ಡಿ. 13 : ಅಪರಿಚಿತ ವಾಹನವೊಂದು ಪಾದಯಾತ್ರಿಗಳ ಮೇಲೆ ಹರಿದು ಇಬ್ಬರು ಬಾಲಕರು ಸೇರಿದಂತೆ ಮೂವರು ಸ್ಥಳದಲ್ಲಿಯೆ ಮೃತಪಟ್ಟ ಭೀಕರ ಘಟನೆ ಯಾದಗಿರಿ-ಶಹಾಪುರ ಹೆದ್ದಾರಿಯಲ್ಲಿನ ಖಾನಪುರ್ ಗ್ರಾಮದ ಬಳಿ ಸೋಮವಾರ ಸಂಜೆ 7.30ರ ಸುಮಾರಿಗೆ ನಡೆದಿದೆ. id="toptextpromo">ಆದೆಪ್ಪ
ಸಿದ್ದಪ್ಪ ಕಿಳಕೇರಿ (10), ವೀರಪ್ಪ ಲಕ್ಷ್ಮಣ ಬೈಲಪತ್ತಾರ (10), ಮತ್ತು ಮಾನಮ್ಮ ಅಶೋಕ ಪತ್ತಾರ (35), ಮೃತಪಟ್ಟವರು. ಇವರೆಲ್ಲ ಖಾನಪುರ್ ಗ್ರಾಮದವರು ಆಗಿದ್ದಾರೆ. ಇವರೆಲ್ಲರೂ ಪಕ್ಕದ ಊರು ಗುಂಡಳ್ಳಿ ಜಾತ್ರೆಯಿಂದ ವಾಪಸ್ ಆಗುವಾಗ ಸ್ವಗ್ರಾಮದ ಹೊರವಲಯದಲ್ಲಿ ಈ ಘಟನೆ ಸಂಭವಿಸಿದೆ. id='are-slot-1' class='oiad oi-axt oiadv'> id='top-searched-articles'>ಅಶೋಕ,
ರಾಜು, ಶಂಕರ ಸೇರಿದಂತೆ ಐವರಿಗೆ ಗಾಯಗಳಾಗಿದ್ದು, ಅವರನ್ನು ಗುಲ್ಬರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.











Click it and Unblock the Notifications