ಅಕ್ರಮ ನಿವೇಶನ ವಾಪಸ್ ಮಾಡಿದ ನ್ಯಾ ಪಾಟೀಲರಿಗೆ 2 ಪ್ರಶ್ನೆ

ಆ. 5ರಂದು ನೂತನ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದ ನ್ಯಾ. ಶಿವರಾಜ್ ಪಾಟೀಲ್ ಅವರು ಈ ವಿವಾದಿತ ನಿವೇಶನದಿಂದಾಗಿ ಸೆ. 19 ರಂದು ಲೋಕಾಯುಕ್ತಕ್ಕೆ ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದರು.
ಬೆಂಗಳೂರು ಉತ್ತರ ತಾಲೂಕು ಕಸಬಾ ಹೋಬಳಿ ನಾಗರವಾರ ಗ್ರಾಮದಲ್ಲಿರುವ ನಿವೇಶನವನ್ನು ಪತ್ನಿ ಅನ್ನಪೂರ್ಣ ಪಾಟೀಲ್ ಹೆಸರಿನಲ್ಲಿ ಶಿವರಾಜ್ ಪಾಟೀಲರು ಲೋಕಾಯುಕ್ತ ಹುದ್ದೆ ವಹಿಸಿಕೊಳ್ಳುವುದಕ್ಕೆ ಮೊದಲೇ ಖರೀದಿಸಿದ್ದರು. ಆದರೆ ಅವರು ಲೋಕಾಯುಕ್ತ ಹುದ್ದೆಗೆ ಏರುತ್ತಿದ್ದಂತೆ ಅದು ವಿವಾದಗ್ರಸ್ತವಾಯಿತು.
ತತ್ಫರಿಣಾಮವಾಗಿ, ಸದರಿ ನಿವೇಶನವನ್ನು ವಾಪಸ್ ಮಾಡಿಕೊಳ್ಳಿ ಎಂದು ನ್ಯಾ. ಪಾಟೀಲರು ತಾವು ರಾಜೀನಾಮೆ ನೀಡಿದ ಬೆನ್ನಿಗೇ (ಸೆಪ್ಟೆಂಬರಿನಲ್ಲಿ) ವೈಯಾಲಿ ಕಾವಲ್ ಹೌಸಿಂಗ್ ಸೊಸೈಟಿಗೆ ಮನವಿ ಮಾಡಿದ್ದರು. ಅದೀಗ ಪ್ರಕ್ರಿಯೆ ಪೂರ್ಣವಾಗಿ ಮತ್ತೆ ಸೊಸೈಟಿ ಕೈಸೇರಿದೆ.
ನ್ಯಾ ಪಾಟೀಲರಿಗೆ ಎರಡೇ ಪ್ರಶ್ನೆ: ಇದೆಲ್ಲದರ ನಡುವೆಯೂ ಕಾಡುವ ಎರಡು ಅನುಮಾನಗಳೆಂದರೆ ನೀವು ಕಾನೂನಿಗೆ ಅನುಗುಣವಾಗಿಯೇ ನಿವೇಶನ ಖರೀದಿಸಿದ್ದೇ ಆದರೆ ಅದನ್ನು ವಾಪಸ್ ಮಾಡುವ ಅಗತ್ಯವೇನಿತ್ತು? ಅಲ್ಲಿಗೆ ಅದು ಕಾನೂನುಬಾಹಿರ ಖರೀದಿ ಎಂಬುದನ್ನು ನೀವೇ ಒಪ್ಪಿಕೊಂಡಾಗಲಿಲ್ಲವೇ?
ಸೋ, ಎರಡನೇ ಪ್ರಶ್ನೆಯೆಂದರೆ ಕಳ್ಳ 1 ರುಪಾಯಿ ಕದ್ದುಬಿಟ್ಟು, ನನ್ನದು ತಪ್ಪಾಯಿತು ಬಿಟ್ಟುಬಿಡಿ ಎಂದು ಆ 1 ರುಪಾಯಿಯನ್ನು ವಾಪಸ್ ಮಾಡಿದಾಗ ಏನು ಮಾಡಬೇಕು, ನ್ಯಾಯಮೂರ್ತಿಗಳಾಗಿದ್ದ ನೀವೇ ಹೇಳಿದರೆ ಸಮಂಜಸವಾದೀತು, ಏನಂತೀರ?












Click it and Unblock the Notifications