ಯಡ್ಡಿಗೆ ಸದ್ಯ ಸಿಎಂ ಆಗೋ ಯೋಗ ಇಲ್ಲ, ಕೋಡಿಮಠ ಶ್ರೀ

Kodimath Seer
ಹಾಸನ, ಡಿ 12: ಕೋಡಿಮಠಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ನೀಡಿ ಶ್ರೀಶ್ರೀಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತೆ ತಮಗೆ ಸಿಎಂ ಆಗುವ ಯೋಗಾನುಯೋಗ ಇದೆಯೇ ಎಂದು ಕೇಳಿದ ಪ್ರಶ್ತ್ನೆಗೆ " ನಿಮಗೆ ಸಿಎಂ ಆಗುವ ಯೋಗ ಸದ್ಯಕಿಲ್ಲ, ಇದು ಸೂಕ್ತ ಕಾಲವೂ ಅಲ್ಲ, ನೀವು ಮೌನ ದಿಂದ ಇರುವುದೇ ಲೇಸು" ಎಂದು ಶ್ರೀಗಳು ಬಿಎಸ್ವೈ ಗೆ ತಿಳಿಸಿದ್ದಾರೆಂದು ಮಠದ ಮೂಲಗಳು ತಿಳಿಸಿವೆ.

ಸಮಾರಂಭ ವೊಂದರಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ ಮತ್ತು ಸ್ವಾಮೀಜಿ ಉಭಯ ಕುಶಲೋಪರಿ ನಡೆಸಿದ್ದಾರೆ. ಈ ಸಮಯದಲ್ಲಿ ಮಾತು ಮಾತಿಗೂ ಶ್ರೀಗಳಿಗೆ ಕೈ ಮುಗಿಯುತ್ತಿದ್ದ ಯಡಿಯೂರಪ್ಪ ನಂತರ ಶ್ರೀಗಳ ಜೊತೆ ಮಠಕ್ಕೆ ತೆರಳಿ ಕಾಫಿ ಕುಡಿದು ಸ್ವಾಮೀಜಿಗಳು ಭವಿಷ್ಯ ಹೇಳುವ ಕೋಣೆಗೆ ತೆರಳಿ ಗುಪ್ತ ಸಮಾಲೋಚನೆ ನಡೆಸಿದ್ದಾರೆ.

ಕೋಣೆಯಿಂದ ಹೊರಬಂದ ಯಡಿಯೂರಪ್ಪ, ಬಹಳ ದಿನಗಳಿಂದ ಶ್ರೀಗಳನ್ನು ಭೇಟಿ ಯಾಗಿರಲಿಲ್ಲ. ಈಗ ಸಮಯ ಬಂದಿದೆ, ಭೇಟಿಯಲ್ಲಿ ರಹಸ್ಯವೇನೂ ಇಲ್ಲ ಎಂದು ಹೇಳಿಕೆ ನೀಡಿದರೆ, ಯಡಿಯೂರಪ್ಪನವರು ಬಂದು ನಮ್ಮ ಆಶೀರ್ವಾದ ಪಡೆದಿದ್ದಾರೆ ಎಂದು ಶ್ರೀಗಳು ಹೇಳಿಕೆ ನೀಡಿದ್ದಾರೆ.

ಯಡಿಯೂರಪ್ಪ ಸಿಎಂ ಆದ ದಿನಗಳಿಂದ ಹಿಡಿದು ಅಧಿಕಾರದಿಂದ ಇಳಿಯುವವರೆಗೂ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕೋಡಿಮಠಕ್ಕೆ ಭೇಟಿ ನೀಡಿರಲಿಲ್ಲ. ಅಧಿಕಾರದಲ್ಲಿದ್ದಾಗ ಮಠಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತೆ, ಅಧಿಕಾರ ಇಲ್ಲದಿದ್ದಾಗ ಬಂದ್ರೆ ಮತ್ತೆ ಅಧಿಕಾರ ಲಭ್ಯವಾಗುತ್ತೆ ಎಂಬ ಪ್ರತೀತಿ ಇದೆ. ಅದನ್ನು ನಂಬಿದ್ದ ಯಡ್ಡಿ ಅಧಿಕಾರ ಹೋದ ನಂತರ ಮಠಕ್ಕೆ ಭೇಟಿ ನೀಡಿದ್ದಾರೆ. ಅವರಿಗೆ ಮತ್ತೆ ಅಧಿಕಾರ ಲಭಿಸುತ್ತೋ ಕಾದು ನೋಡಬೇಕು..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+