ಬಿಜೆಪಿಯನ್ನು ಬೆಚ್ಚಿ ಬೀಳಿಸಿದ ಶ್ರೀರಾಮುಲು ಕಾರ್ಯತಂತ್ರ

Sriramulu
ಬೆಂಗಳೂರು, ಡಿ 10: ಮೇಲ್ಮನೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಸಿಎಂ ಸದಾನಂದ ಗೌಡ ಅವರನ್ನು ಶತಾಯುಗತಾಯು ಸೋಲಿಸಲು ಸಾಧ್ಯವಾಗುವ ಎಲ್ಲಾ ಪ್ರಯತ್ನಗಳಿಗೆ ಸ್ವಾಭಿಮಾನಿ ಶ್ರೀರಾಮುಲು ಭಾರೀ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಸಿಎಂ ವಿರುದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಆ ಅಭ್ಯರ್ಥಿಯನ್ನು ಬೆಂಬಲಿಸಲು ಶ್ರೀರಾಮುಲು ನಿರ್ಧರಿಸಿದ್ದಾರೆ.

ಆಡಳಿತ ಬಿಜೆಪಿಗೆ ಮುಖಭಂಗ ಮಾಡಲು ಎಲ್ಲಾ ರೀತಿಯಲ್ಲಿ ರಾಮುಲು ಸಜ್ಜಾಗಿದ್ದಾರೆನ್ನಲಾಗಿದೆ. ವಿಪ್ ಉಲ್ಲಂಘನೆಯಾದರೂ ಚಿಂತೆಯಿಲ್ಲ ಈ ಚುನಾವಣೆಯಲ್ಲಿ ಮುಖ್ಯಮಂತ್ರಿಗಳನ್ನು ಸೋಲಿಸಿ ತಮ್ಮ ತಾಕತನ್ನು ಪ್ರದರ್ಶಿಸಲು ಶ್ರೀರಾಮುಲು ಮತ್ತು ಅವರ ಬೆಂಬಲಿಗ ಶಾಸಕರು ನಿರ್ಧರಿಸಿದ್ದು ಬಿಜೆಪಿಗೆ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ರಾಮುಲು ಬಿಜೆಪಿ ವಿರುದ್ದ ಇಡುವ ಎಲ್ಲಾ ಹೆಜ್ಜೆಗೂ ಜೆಡಿಎಸ್ ಬೆಂಬಲ ಇದ್ದೇ ಇರುತ್ತೆ ಎನ್ನುವ ಹುಮ್ಮಸ್ಸಿನಲ್ಲಿರುವ ಶೀರಾಮುಲು ಅವರ ನಡೆ ಆಡಳಿತ ಪಾಳಯವನ್ನು ಬೆಚ್ಚಿ ಬೀಳಿಸುವಂತೆ ಮಾಡಿದರೆ, ವಿರೋಧ ಪಕ್ಷಗಳಿಗೆ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಲು ಹೊಸ ಹುರುಪು ಬಂದಂತಾಗಿದೆ.

ಬುಧವಾರ ( ಡಿ 7) ಪ್ರಮಾಣವಚನ ಸ್ವೀಕರಿಸಿ ಹೈದರಾಬಾದ್ ನಲ್ಲಿ ಗೆಳೆಯ ಜನಾರ್ಧನ ರೆಡ್ಡಿ ಭೇಟಿ ಮಾಡಿದ್ದ ರಾಮುಲು ಅಸೆಂಬ್ಲಿಯಲ್ಲಿ ಬಿಜೆಪಿ ಶಾಸಕರ ಜೊತೆ ಲೋಕಾಭಿರಾಮ ಮಾತನಾಡುತ್ತಾ ತನ್ನತ್ತ ಸೆಳೆಯುತ್ತಿದ್ದಾರೆಂದು ಬಿಜೆಪಿ ಆಪ್ತವಲಯದಿಂದ ತಿಳಿದು ಬಂದಿದೆ.

ತಮ್ಮ ಶಾಸಕ ಸ್ಥಾನಕ್ಕೆ ಕುತ್ತು ಬಂದರೂ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಕೆಲ ಬಿಜೆಪಿ ಶಾಸಕರು ನೀಡಿರುವ ಭರವಸೆ ಶ್ರೀರಾಮುಲು ಅವರನ್ನು ಈ ವಿಷಯದಲ್ಲಿ ಇನ್ನಷ್ಟು ಕಾರ್ಯೋನ್ಮುಖರನ್ನಾಗಿ ಮಾಡಿದೆ. ಬಿಜೆಪಿಗೆ ಪಾಠ ಕಲಿಸಬೇಕೆನ್ನುವ ಒಂದೇ ಒಂದು ಅಜಂಡಾ ಇಟ್ಟು ಕೊಂಡಿರುವ ಶ್ರೀರಾಮುಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಎಚ್ ಡಿ ರೇವಣ್ಣ ಅವರ ಬಳಿ ಚರ್ಚಿಸಿ ಇಂದು ( ಡಿ 10) ಸಂಜೆಯೊಳಗೆ ತನ್ನ ಈ ಕಾರ್ಯಾಚರಣೆಗೆ ಅಂತಿಮ ರೂಪು ನೀಡಲಿದ್ದಾರೆನ್ನುವುದು ಸದ್ಯದ ವರದಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+