ಶ್ರೀರಾಮುಲು ಹೊಸ ಪಕ್ಷದ ಹೆಸರು 'ಬಿಎಸ್ಆರ್' ಪಕ್ಷ

ಈ ಮಧ್ಯೆ ಶ್ರೀರಾಮುಲು ಪಕ್ಷಕ್ಕೆ ಸಂಭವನೀಯ ಹೆಸರುಗಳನ್ನು ಸೂಚಿಸದ ಓದುಗರಿಗೆ ಅನಂತಾನಂತ ಧನ್ಯವಾದಗಳು. ಬ್ಯಾಡ್ ಲಕ್, ನಾವು, ನೀವು ಸೂಚಿಸಿದ ಹೆಸರು ಮಾನ್ಯ ಬಳ್ಳಾರಿ ವೀರ ಶ್ರೀರಾಮುಲು ಅವರಿಗೆ ಮೆಚ್ಚುಗೆಯಾಗಿಲ್ಲ.
ಬಡವ ಶ್ರಮಿಕ ರೈತರ ಪಕ್ಷ ಹೇಳೋಕೆ ಕಷ್ಟವಾದರೆ ಬಿಎಸ್ಆರ್ ಪಕ್ಷ ಎನ್ನಬಹುದು- ಇದು ಶ್ರೀರಾಮುಲು ಹೊಸ ಪಕ್ಷದ ಹೆಸರು.
ಹೊಸಪಕ್ಷ ಸ್ಥಾಪನೆ ನಂತರ ಮತ್ತೆ ಚುನಾವಣೆ ಕಣಕ್ಕಿಳಿಯುವ ಬಗ್ಗೆ ಶ್ರೀರಾಮುಲು ಸೂಚನೆ ನೀಡಿದ್ದಾರೆ. ನಿರೀಕ್ಷೆಯಂತೆ ಡಿ.22ರಂದು ನಡೆಯಲಿರುವ ಮೇಲ್ಮನೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರ ವಿರುದ್ಧ ಜೆಡಿಎಸ್ ಕಾಂಗ್ರೆಸ್ ನಿಲ್ಲಿಸುವ ಅಭ್ಯರ್ಥಿಗೆ ಬೆಂಬಲ ನೀಡುವ ಸಾಧ್ಯತೆ ಬಗ್ಗೆ ಶ್ರೀರಾಮುಲು ಚರ್ಚಿಸುತ್ತಿದ್ದಾರೆ.












Click it and Unblock the Notifications