ಶ್ರೀರಾಮುಲು ಹೊಸ ಪಕ್ಷಕ್ಕೊಂದು ಹೆಸರು ಕೊಡಿ

ಬೆಂಗಳೂರು, ಡಿ.8: ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಕೃಪಾ ಪೋಷಿತ ರಾಜಕೀಯ ನಾಯಕ, ಹಾಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ ಶ್ರೀರಾಮುಲು ಅವರು ಹೊಸ ಪಕ್ಷ ಸ್ಥಾಪಿಸುವುದು ಖಚಿತವಾಗಿದೆ. ಈಗ ಅವರ ಹೊಸ ಪಕ್ಷಕ್ಕೆ ನಾಮಕರಣ ಮಾಡುವ ಸಮಯ ಬಂದಿದೆ.
ವೈಎಸ್ ಆರ್ ಕಾಂಗ್ರೆಸ್ ಪಕ್ಷದ 'ಫ್ಯಾನ್'ಗುರುತನ್ನು ಪಡೆದು ಬಳ್ಳಾರಿ ಉಪ ಚುನಾವಣೆ ಗೆದ್ದ ಶ್ರೀರಾಮುಲು ಅವರು ಕರ್ನಾಟಕದಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಗಾಲಿ ಜನಾರ್ದನ ರೆಡ್ಡಿ ಅವರು ಜೈಲಿನಿಂದ ಹೊರ ಬಂದ ನಂತರ ಜಗನ್ ಮೋಹನ್ ರೆಡ್ಡಿ ನೆರವಿನಿಂದ ಕರ್ನಾಟಕದಲ್ಲಿ ವೈಎಸ್ ಆರ್ ಕಾಂಗ್ರೆಸ್ ಘಟಕ ಎಲ್ಲೆಡೆ ಸ್ಥಾಪಿಸಲಾಗುವುದು ಎಂಬ ಸುದ್ದಿಯಿದೆ.
ಸುಮಾರು 14 ಜನ ಶಾಸಕರ ಬೆಂಬಲ ನನಗಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.ಶ್ರೀರಾಮುಲುಗೆ ಜೆಡಿಎಸ್ ಬೆಂಬಲ ನೀಡುವ ಬಗ್ಗೆ ಕೂಡಾ ಸುದ್ದಿ ಇದೆ. ಇದು ಬಿಜೆಪಿ ಸರ್ಕಾರ ಒಂದು ರೀತಿ ಮಾರಕವಾಗುವ ಲಕ್ಷಣಗಳಿದೆ.
ಆದರೆ, ಇದುವರೆವಿಗೂ ಶ್ರೀರಾಮುಲು ಅವರು ಪಕ್ಷದ ಹೆಸರಿನ ಗುಟ್ಟು ಬಿಟ್ಟುಕೊಟ್ಟಿಲ್ಲ. ಸದ್ಯಕ್ಕೆ ಸಂಭವನೀಯ ಹೆಸರುಗಳನ್ನು ನೋಡೋಣ.. ನಿಮ್ಮ ಇಷ್ಟದ ಹೆಸರುಗಳನ್ನು ಸೂಚಿಸಲು ಮರೆಯದಿರಿ
* ಶ್ರೀಕೃಷ್ಣದೇವರಾಯ ಜನ ಸೇವಾ ಪಕ್ಷ
* ಬಳ್ಳಾರಿ ಜನತಾ ಪಾರ್ಟಿ
* ಶ್ರೀರಾಮುಲು ಜನತಾ ಪಕ್ಷ
* ಬಳ್ಳಾರಿ ಜನ ಸೇವಾ ಪಾರ್ಟಿ
* ವೈಎಸ್ ಆರ್ ಕಾಂಗ್ರೆಸ್ (ಕರ್ನಾಟಕ)
* ವೈಎಸ್ ಆರ್ ಜನ ಪಕ್ಷ
* ಜನ ಪ್ರಾದೇಶಿಕ ಪಕ್ಷ












Click it and Unblock the Notifications