ಮಸಾಜ್ ಪಾರ್ಲರ್‌ನಲ್ಲಿ ಪೂಜಾ ಸೇರಿ ಮೂವರ ಬಂಧನ
ಬೆಂಗಳೂರು,
ಡಿ.6: ಕನ್ನಡ ದಿನ ಪತ್ರಿಕೆಗಳಲ್ಲಿ "ನಿಸರ್ಗ ಪ್ರೊವೈಡರ್‍ಸ್, ಪ್ರೊಫೆಷನಲ್ ಬಾಡಿ ಮಸಾಜ್ ಫಾರ್ ಮೇಲ್ & ಫಿಮೇಲ್" ಎಂದು ಜಾಹಿರಾತನ್ನು ನೀಡಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ಹುಡುಗಿಯರನ್ನು ಇಟ್ಟುಕೊಂಟು ಹೈಟೆಕ್ ವೇಶ್ಯವಾಟಿಕೆ ನಡೆಯುತ್ತಿದ್ದ ಆಸಾಮಿಗಳನ್ನು ಸಿ.ಸಿ.ಬಿ. ಮಹಿಳೆ ಮತ್ತು ಮಾದಕದ್ರವ್ಯ ದಳದ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. id="toptextpromo">ಅಶೋಕನಗರ
ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಆಲ್ಬರ್ಟ್ ಸ್ಟ್ರೀಟ್ ನಂ.21/1 ಕಟ್ಟಡದ 3ನೇ ಮಹಡಿಯ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪಿಗಳಾದ ಬೆಂಗಳೂರಿನ ಕೃಷ್ಣ ರಾವ್, ಮಿಜೋರಾಂನ ಜೆಸ್ಸಿ,ಬೆಂಗಳೂರಿನ ಶಿವಂ ಹಾಗೂ ಉತ್ತರ ಪ್ರದೇಶದ ಪೂಜಾ ಎಂಬುವವರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆರೋಪಿಗಳಿಂದ
ವೇಶ್ಯಾವಾಟಿಕೆಯಿಂದ ಸಂಪಾದಿಸಿದ ಹಣ ರು.17,000 ಹಾಗೂ 4 ಮೊಬೈಲ್ ಪೋನ್‌ಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ. ಈ ಕಾಯಾಚರಣೆಯಲ್ಲಿ ಮಸಾಜ್ ಪಾರ್ಲರ್ ಮಾಲೀಕ ಮುರಳಿ ಎಂಬುವವನು ತಲೆ ಮರೆಸಿಕೊಂಡಿರುತ್ತಾನೆ. ಈತನ ಪತ್ತೆ ಕಾರ್ಯ ಮುಂದುವರೆದಿದೆ. ಈ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. (ಒನ್‌ಇಂಡಿಯಾ ಕನ್ನಡ)











Click it and Unblock the Notifications