ಕರ್ನಾಟಕಕ್ಕೆ ಬಾವುಟವೇ ಇಲ್ಲ; ರಾಜ್ಯೋತ್ಸವ ಬಾವುಟ ಅಧಿಕೃತವಲ್ಲ!

no-official-state-flag-for-karnataka
ಬೆಂಗಳೂರು, ಡಿ.6: ತುಸು ಆಶ್ಚರ್ಯ. ಆದರೂ ನಂಬಲೇ ಬೇಕು. ಏನಪಾ ಅಂದರೆ ಕರ್ನಾಟಕ ಸರ್ಕಾರಕ್ಕೆ ಅಧಿಕೃತ ಧ್ವಜವೇ ಇಲ್ಲ. ಇನ್ನೂ ಸಖೇದಾಶ್ಚರ್ಯವೆಂದರೆ ತನ್ನದೇ ಆದ ಧ್ವಜ ಹೊಂದುವ ಆಸಕ್ತಿಯೂ ಸರಕಾರಕ್ಕೆ ಇಲ್ಲ!

ಹೀಗೆಂದಾಗ ತಕ್ಷಣಕ್ಕೆ ನಿಮಗೆ ಅನಿಸುತ್ತದೆ - ಇದೆಯಲ್ಲ ಕನ್ನಡ ಬಾವುಟ. ಅದೇ ಕೆಂಪು ಮತ್ತು ಹಳದಿ ಬಣ್ಣದ್ದು ಎನ್ನುತ್ತೀರಿ. ಆದರೆ ಗಮನಿಸಿ. ಅದಕ್ಕೆ ಅಧಿಕೃತ ಮಾನ್ಯತೆಯೇ ಇಲ್ಲ! ಕನ್ನಡ ಬಾವುಟವೇ ನಮ್ಮ ರಾಜ್ಯದ ಅಧಿಕೃತ ಬಾವುಟ ಎಂದು ತಿಳಿದರೆ ತಪ್ಪಾದೀತು.

ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್ ಈ ವಿಷಯವನ್ನು ಸೋಮವಾರ ವಿಧಾನಸಭೆ ಕಲಾಪದ ವೇಳೆ ಪ್ರಸ್ತಾಪಿಸಿದ್ದಾರೆ. ಇಡೀ ರಾಜ್ಯದಲ್ಲಿ ಅಖಂಡವಾಗಿ ಏಕರೂಪ ಬಾವುಟ ಹಾರಾಡಲಿ ಎಂದು ಕೋರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಎಂ. ಕಾರಜೋಳ ಅವರು ಧ್ವಜ ಶಿಷ್ಟಾಚಾರದ ಪ್ರಕಾರ ರಾಜ್ಯಗಳು ತನ್ನದೇ ಆದಂತಹ ಬಾವುಟಗಳನ್ನು ಪ್ರತ್ಯೇಕವಾಗಿ ಹೊಂದುವಂತಿಲ್ಲ. ನಮ್ಮ ರಾಷ್ಟ್ರಧ್ವಜವೆಂದರೆ ಐಕ್ಯತೆ ಮತ್ತು ಸಾರ್ವಭೌಮತ್ವದ ಸಂಕೇತ. ರಾಜ್ಯಗಳು ತನ್ನದೇ ಆದ ಬಾವುಟಗಳನ್ನು ಹೊಂದಿದರೆ ಅದರಿಂದ ರಾಷ್ಟ್ರಧ್ವಜದ ಗೌರವ ಕುಗ್ಗಿದಂತಾಗುತ್ತದೆ' ಎಂದು ಸಮಜಾಯಿಷಿ ನೀಡಿ, ಕೈತೊಳೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+