1000 ಕೋಟಿ ರು ವೆಚ್ಚದ ಬಿಐಎಎಲ್ ವಿಸ್ತರಣೆ ಜಾರಿ

Bial Expansion as per schedule
ಬೆಂಗಳೂರು, ಡಿ.6: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(ಬಿಐಎಎಲ್) ನ ಟರ್ಮಿನಲ್ ವಿಸ್ತರಣೆ ಯೋಜನೆ ಜಾರಿಯಲ್ಲಿದೆ. ನಿಗದಿತ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಯೋಜನಾ ನಿರ್ವಹಣಾಧಿಕಾರಿ ಹರಿ ಮರಾರ್ ಹೇಳಿದ್ದಾರೆ.

ಸುಮಾರು 1000 ಕೋಟಿ ರು ವೆಚ್ಚದ ಯೋಜನೆಗೆ ಕಳೆದ ವರ್ಷ ಚಾಲನೆ ದೊರೆಕಿತ್ತು. 2013ರೊಳಗೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 12 ಮಿಲಿಯನ್ ಪ್ರಯಾಣಿಕರನ್ನು ಸಂಭಾಳಿಸುತ್ತಿರುವ ಬಿಐಎಎಲ್, 2014-15ರ ವೇಳೆಗೆ 17 ಮಿಲಿಯನ್ ಪ್ರಯಾಣಿಕರನ್ನು ಕಾಣಲಿದೆ.

ಪ್ರವಾಸೋದ್ಯಮಕ್ಕೆ ಆದ್ಯತೆ: ಸುಮಾರು 1,34,000 ಚ.ಮೀ ವಿಸ್ತೀರ್ಣದ ಟರ್ಮಿನಲ್ ಪ್ರದೇಶ ವಿಸ್ತರಣೆಗೊಳ್ಳಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕರ್ನಾಟಕ ಪ್ರವಾಸೋದ್ಯಮ ಹಾಗೂ ಕಾಫಿ ಬೋರ್ಡ್ ಜೊತೆ ಮಾತುಕತೆ ನಡೆಸಲಾಗಿದೆ. ಕಾಫಿ ಟೂರಿಸಂ ಎಂಬ ಹೊಸ ಕಾನ್ ಸೆಪ್ಟ್ ಹೊರಹೊಮ್ಮಿದ್ದು 'ಕಾಪಿ ಟ್ರಯಲ್' ಎಂದು ಸದ್ಯಕ್ಕೆ ಹೆಸರಿಸಲಾಗಿದೆ.

ಥಾಯ್ ಏರ್ ಏಷ್ಯಾ, ಥಾಯ್ ಟೈಗರ್, ಡಿಎಚ್ ಎಲ್ ಕಾರ್ಗೊ, ಟಿಎನ್ ಟಿ ಕಾರ್ಗೊ, ಚೀನಾ ಸದರನ್ ಹಾಗೂ ಎಎನ್ಎ ಏರ್ ವೇಸ್ ಗಳು ಬೆಂಗಳೂರಿನಿಂದ ವಿಮಾನಯಾನ ಆರಂಭಿಸಲು ಉತ್ಸುಕವಾಗಿದೆ.

ಹೀಗಾಗಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವ ಸಿಗಲಿದೆ. 2010 ರಲ್ಲಿ ಸುಮಾರು 11.24 ಮಿಲಿಯನ್ ಪ್ರಯಾಣಿಕರು ಪಯಣಿಸಿದ್ದರು. ಈ ಸಂಖ್ಯೆ ಮುಂಬರುವ ವರ್ಷಗಳಲ್ಲಿ ದುಪ್ಪಟ್ಟಾಗಲಿದೆ ಎಂದು ಹರಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+