ಬಳ್ಳಾರಿ ಜಯ ಮತದಾರ ದೇವರಿಗೆ ಅರ್ಪಣೆ: ಶ್ರೀರಾಮುಲು

B Sriramulu
ಬಳ್ಳಾರಿ, ಡಿ.4: ಬಹು ನಿರೀಕ್ಷಿತ ಬಳ್ಳಾರಿ ಗ್ರಾಮೀಣ ಉಪ ಚುನಾವಣಾ ಸಮರದಲ್ಲಿ ಪಕ್ಷೇತರ ಅಭ್ಯರ್ಥಿ 'ಸ್ವಾಭಿಮಾನಿ' ಬಿ ಶ್ರೀರಾಮುಲುಗೆ ಭಾರಿ ಅಂತರದ ಜಯ ಲಭಿಸಿದೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಶ್ರೀರಾಮುಲು ಅವರು ಅಂತಿಮವಾಗಿ ಅಂತರದಿಂದ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ರಾಮ್ ಪ್ರಸಾದ್ ಅವರನ್ನು ಸೋಲಿಸಿದ್ದಾರೆ.

ಅಂತಿಮ ಸುತ್ತಿನ ಎಣಿಕೆ ನಂತರದ ಫಲಿತಾಂಶಕ್ಕೆ ನೋಡಿ

ಆಡಳಿತಾರೂಢ ಬಿಜೆಪಿ ಸರ್ಕಾರ ನೆಲಕಚ್ಚಿದ್ದು, ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಈ ನಡುವೆ 13 ಸುತ್ತಿನ ಎಣಿಕೆ ನಂತರ ಜಯ ಖಚಿತಪಡಿಸಿಕೊಂಡ ಶ್ರೀರಾಮುಲು ಅವರು ತಮ್ಮ ಗೆಲುವನ್ನು ಬಳ್ಳಾರಿ ಜನತೆಗೆ ಅರ್ಪಿಸಿದ್ದಾರೆ.

"ನಮ್ಮ ತಾಲೂಕು, ನಮ್ಮ ಜಿಲ್ಲೆ ನಮ್ಮ ಕರ್ನಾಟಕದ ಜನತೆಗೆ ಈ ಗೆಲುವು ಅರ್ಪಿಸುತ್ತೇನೆ. ಹೊಸ ಪಕ್ಷ ಸ್ಥಾಪನೆ ಬಗ್ಗೆ ನಮ್ಮ ಆಪ್ತರೊಡನೆ ಚರ್ಚಿಸಿ ಘೋಷಣೆ ಮಾಡುತ್ತೇನೆ. ಉಪಕಾರ ಮರೆತ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾವು ಪಟ್ಟ ಶ್ರಮವನ್ನು ಮರೆತ ಬಿಜೆಪಿಗೆ ಜನರು ಶಿಕ್ಷೆ ನೀಡಿದ್ದಾರೆ.

ನಮ್ಮ ಬಳ್ಳಾರಿ ಜಿಲ್ಲೆ ಶಾಸಕರು, ಸಂಸದರು ನನ್ನ ಪರ ಹಗಲಿರುಳು ಪ್ರಚಾರ ಕಾರ್ಯದಲ್ಲಿ ನಿರತರಾಗಿ ನನಗೆ ಗೆಲುವು ತಂದು ಕೊಡಲು ಕಷ್ಟಪಟ್ಟಿದ್ದಾರೆ. ನಾನು ನನ್ನ ಅಭಿಮಾನಿಗಳಿಗೆ ಋಣಿಯಾಗಿದ್ದೇನೆ. ಜನತೆಯ ಪಾದಕ್ಕೆ ನನ್ನ ಗೆಲುವನ್ನು ಅರ್ಪಿಸುತ್ತೇನೆ" ಎಂದು ಶ್ರೀರಾಮುಲು ಅವರು ಹೇಳಿದ್ದಾರೆ.

ಫ್ಯಾನ್ ಕೈ ಹಿಡಿದ ಮತದಾರ: ಬಳ್ಳಾರಿಯಲ್ಲಿ ಹಿಂದುಳಿದ ವರ್ಗದ ಮತಗಳೇ ನಿರ್ಣಯಕ ಎಂಬ ಸತ್ಯ ಗೊತ್ತಿದ್ದ ಬಿಜೆಪಿ, ಕಾಂಗ್ರೆಸ್ ಪಕ್ಷಗಳು, ಶ್ರೀರಾಮುಲುಗೆ ಬೀಳಬಹುದಾದ ಮತಗಳನ್ನು ವಿಭಜನೆ ಮಾಡುವ ತಂತ್ರ ಮಾಡಲು ಹೋಗಿ ಸೋಲು ಕಾಣಬೇಕಾಯಿತು.

ಲಿಂಗಾಯರ, ಬಲಿಜ, ಮುಸ್ಲೀಮ್ ಮತ ಸೆಳೆಯಲು ಬಿಜೆಪಿ ಹವಣಿಸಿತು, ಯಡಿಯೂರಪ್ಪ ಅವರನ್ನು ಪ್ರಚಾರಕ್ಕೆ ಕರೆ ತಂದು ಮ್ಯಾಜಿಕ್ ಮಾಡುವ ಪ್ರಯತ್ನ ಕೂಡಾ ಫಲ ನೀಡಲಿಲ್ಲ. ಆದರೆ, ಕೊನೆ ಹಂತದಲ್ಲಿ ಮುಸ್ಲಿಂ ಮತ ವಾಲುವುದನ್ನು ಕಂಡ ಶ್ರೀರಾಮುಲು ಜಮೀರ್ ಸಹಾಯ ಬಯಸಿದ್ದು ಫಲ ನೀಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+