ಶ್ರೀರಾಮುಲುಗೆ ಬಿಜೆಪಿ ಬಾಗಿಲು ಮುಚ್ಚಿದೆ: ಸಿಎಂ ಡಿವಿಎಸ್

ಬಳ್ಳಾರಿಯಲ್ಲಿ ಕಳೆದ 15 ದಿನಗಳಿಂದ ಉತ್ತಮ ಸಾಧನೆ ಮೆರೆದಿದೆ. ಶೂನ್ಯದಿಂದ 17 ಸಾವಿರದಷ್ಟು ಮತಗಳಿಸುವುದು ಸುಲಭವಲ್ಲ. ಮುಂದಿನ ಚುನಾವಣೆಯಲ್ಲಿ ನಮಗೆ ಗೆಲುವು ಲಭಿಸಲಿದೆ. ಸಾಮೂಹಿಕ ನಾಯಕತ್ವದಡಿಯಲ್ಲಿ ಬಳ್ಳಾರಿಯಲ್ಲಿ ಪ್ರಚಾರ ಕಾರ್ಯ ನಡೆಸಲಾಯಿತು. ಮುಂದೆ ಕೂಡಾ ಸಮೂಹಿಕ ನಾಯಕತ್ವವನ್ನೇ ಬಿಜೆಪಿ ಬಳಸಲಿದೆ ಎಂದು ಸಿಎಂ ಸದಾನಂದ ಗೌಡ ಹೇಳಿದರು.
ನಗರದ ಬನಶಂಕರಿಯಲ್ಲಿ ನಿರ್ಮಾಣಗೊಂಡಿರುವ ನೂತನ ಟಿಟಿಎಂಸಿ ಬಸ್ ನಿಲ್ದಾಣದ ಉದ್ಘಾಟನೆ ಕಾರ್ಯ ನೆರವೇರಿಸಿದ ನಂತರ ಸದಾನಂದ ಗೌಡರು ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದರು. ಶ್ರೀರಾಮುಲು ಗೆಲುವಿನಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಪಕ್ಷದಿಂದ ಅಮಾನತುಗೊಂಡ ಬಳ್ಳಾರಿ ಶಾಸಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಕಾರ್ಯಕರ್ತರ ಗೊಂದಲದಿಂದ ಬಿಜೆಪಿಗೆ ಸೋಲು ಉಂಟಾಗಿದೆ ಎಂದು ಬಿಜೆಪಿ ನಾಯಕ ಆರ್ ಅಶೋಕ್ ಅವರು ಒಪ್ಪಿಕೊಂಡಿದ್ದಾರೆ.












Click it and Unblock the Notifications