ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ವಿವಿಯಿಂದ 400 ವಿದ್ಯಾರ್ಥಿನಿಯರು ನಾಪತ್ತೆ

By Srinath
|
Google Oneindia Kannada News

mysore-university-400-girls-missing
ಮೈಸೂರು, ಡಿ.2: ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುವ ಕಾಲೇಜುಗಳಿಂದ ನಾಲ್ಕೈದು ವರ್ಷಗಳಲ್ಲಿ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕಾಣೆಯಾಗಿದ್ದಾರೆ. ನಾಪತ್ತೆ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹದಿಹರೆಯದ ವಿದ್ಯಾರ್ಥಿನಿಯರೇ ಹೆಚ್ಚು. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವವರಲ್ಲಿ ಈ ವಯಸ್ಸಿನವರೇ ಹೆಚ್ಚಾಗಿರುವುದು ಆಘಾತಕಾರಿ ಬೆಳವಣಿಗೆ.

ಈ ಬಗ್ಗೆ ಅರಿವು ಮೂಡಿಸಲು ಪೋಷಕರು ವಿಫಲರಾಗಿದ್ದಾರೆ. ಸಂಶೋಧನೆಯ ಪ್ರಕಾರ ಪೋಷಕರ ಅತಿಯಾದ ಪ್ರೋತ್ಸಾಹ ಹಾಗೂ ಜೀವನ ಶೈಲಿ ಹೆಣ್ಣು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳ ಜತೆ ಪೋಷಕರಿಗೂ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ರೂಪಿಸುವ ಜರೂರತ್ತು ಇದೆ.

ವರ್ಷದಿಂದ ವರ್ಷಕ್ಕೆ ಕಾಣೆಯಾಗುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚುತ್ತಿದ್ದು, ಇವರಲ್ಲಿ ಪತ್ತೆಯಾದವರ ಸಂಖ್ಯೆ ಕೇವಲ ಬೆರಳೆಣಿಕೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ ಹೇಳಿದ್ದಾರೆ.

ಮಹಿಳಾ ಪರ ಚಿಂತನೆ ಹಾಗೂ ಕಾರ್ಯಕ್ರಮಗಳ ಅಭಿವೃದ್ಧಿಯಲ್ಲಿ ಮೈಸೂರು ಜಿಲ್ಲೆ ಸಮತೋಲನ ಬೆಳವಣಿಗೆ ಹೊಂದಿದೆ. ಆದರೆ, ಮಹಿಳೆಯರ ಅದರಲ್ಲೂ 15ರಿಂದ 22 ವರ್ಷದೊಳಗಿನ ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣಗಳು ಯಥೇಚ್ಛವಾಗಿ ಜಿಲ್ಲೆಯಲ್ಲಿ ವರದಿಯಾಗಿರುವುದು ಆತಂಕದ ಸಂಗತಿ ಎಂದು ಹೇಳಿದರು.

ವಿದ್ಯಾರ್ಥಿನಿಯರು ಕಾಣೆಯಾಗುತ್ತಿರುವ ಕುರಿತು ಮಹಿಳಾ ಆಯೋಗ ವಿವಿಯ ಆಡಳಿತ ಮಂಡಳಿಗೆ ಸೂಕ್ತ ನಿರ್ದೇಶನ ನೀಡಿದ್ದರೂ ಪ್ರಯೋಜನವಾಗಿಲ್ಲ. ದೇಶದ ಇತರೆ ವಿಶ್ವವಿದ್ಯಾನಿಲಯಗಳಿಗೆ ಹೋಲಿಸಿದರೆ ನಾಪತ್ತೆ ಪ್ರಕರಣಗಳು ಮೈಸೂರು ವಿವಿಯಲ್ಲಿ ಹೆಚ್ಚು ವರದಿಯಾಗುತ್ತಿವೆ ಎಂದು ಅವರು ಆತಂಕ ಪಟ್ಟಿದ್ದಾರೆ.

ಜಾಗೃತಿ ಕಾರ್ಯಕ್ರಮ ಕಡ್ಡಾಯ... ನಾಪತ್ತೆ ಪ್ರಕರಣಗಳ ಉಲ್ಬಣಕ್ಕೆ ಕಾರಣ ಹುಡುಕಿ, ಅವುಗಳನ್ನು ನಿಯಂತ್ರಿಸುವ ಹಾಗೂ ಆ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲು ಮಹಿಳಾ ಆಯೋಗ ಚಿಂತಿಸಿದೆ ಎಂದು ಹೇಳಿದರು.

English summary
Karnataka State Women Commission Chairperson C. Manjula has said that 400 girls are missing from Mysore University in the last 4-5 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X