ಹೆಚ್ಚು'ವರಿ' ಮತ: ಬಿಜೆಪಿಗೆ ನಡುಕ; ರಾಮುಲು ಬಳಗ ಮುಗುಳ್ನಗೆ
ಬಳ್ಳಾರಿ,
ಡಿ.1: ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಶೇ. 13ರಷ್ಟು ಅಧಿಕ ಮತದಾನ ಆಗಿದೆ. ಇದರಿಂದ ಶ್ರೀರಾಮುಲು ಅಭಿಮಾನಿಗಳು ಗೆಲುವಿನ ನಗಾರಿ ಬಾರಿಸುತ್ತಿದ್ದಾರೆ. id="toptextpromo">ಶೇ.
72ರಷ್ಟು ಹೆಚ್ಚುವರಿಯಾಗಿ ಮತ ಚಲಾವಣೆ ಆಗಿರುವುದು ಬಿಜೆಪಿಗೆ 'ವರಿ'ಯಾಗಿದೆ. ಕಡಿಮೆ ಮತದಾನವಾಗಿದ್ದರೆ ಆ ಪಕ್ಷವೇ ಮೇಲುಗೈ ಸಾಧಿಸುತ್ತಿತ್ತು ಎಂಬುದು ಕ್ಷೇತ್ರದ ರಾಜಕೀಯ ಮಂಡಿತರ ಅನಿಸಿಕೆ. ಹೀಗಾಗಿ, ರಾಮುಲು ಬಳಗ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದು, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧೆಡೆ ಭರ್ಜರಿ ಬೆಟ್ಟಿಂಗ್ ಶುರುವಾಗಿದೆ. ಬಳ್ಳಾರಿಯಲ್ಲಿ ಶ್ರೀರಾಮುಲು ಅವರೇ ಗೆಲ್ಲುತ್ತಾರೆ ಎಂದು ಒಂದಕ್ಕೆ ಎರಡರಂತೆ ಬೆಟ್ ಕಟ್ಟಲಾಗುತ್ತಿದೆ. id='are-slot-1' class='oiad oi-axt oiadv'> id='top-searched-articles'>ಬಳ್ಳಾರಿ
ಮಾತ್ರವಲ್ಲ ಗದಗ, ಕೊಪ್ಪಳ, ರಾಯಚೂರು, ಕಲ್ಬುರ್ಗಿ ಹಾಗೂ ಹಾಸನದಲ್ಲೂ ಬೆಟ್ಟಿಂಗ್ ಭರಾಟೆ ಇದೆ. ಸುಮಾರು 1 ಸಾವಿರ ರೂ. ನಿಂದ 1 ಲಕ್ಷ ರೂ. ವರೆಗೂ ಬೆಟ್ಟಿಂಗ್ ನಡೆಯುತ್ತಿದೆ. ಭಾನುವಾರ ಮತ ಎಣಿಕೆಯಾಗಲಿದ್ದು ಆ ವೇಳೆಗೆ ಬೆಟ್ಟಿಂಗ್ ಮೊತ್ತ ಮತ್ತಷ್ಟು ಏರುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.











Click it and Unblock the Notifications