ಎದೆಗೂಡಿನಲ್ಲಿ ಬಳ್ಳಾರಿ ಕಫ: ಯಡ್ಡಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ

ಅನಾರೋಗ್ಯದಿಂದಾಗಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಗೆಳೆಯ ಸಾಗರ್ ಅವರ ಆಸ್ಪತ್ರೆಗೆ ಭಾನುವಾರ ಸಂಜೆಯೇ ದಾಖಲಾಗಿದ್ದ ಯಡಿಯೂರಪ್ಪ ಅವರನ್ನು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಾಗರ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಜಗದೀಶ್ ಚಂದ್ರ ಅವರು ಯಡಿಯೂರಪ್ಪ ಜತೆಗೆ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ತೆರಳಿದ್ದಾರೆ.
ಬಳ್ಳಾರಿ ರಾಜಕೀಯ ಕಫ: ದೀರ್ಘ ಅವಧಿಯ ಜೈಲುವಾಸದಿಂದ ಹೊರಬರುತ್ತಿದ್ದಂತೆಯೇ ವೈಷ್ಣೋದೇವಿ ದರ್ಶನಕ್ಕಾಗಿ ಪ್ರವಾಸ, ಅನಂತರ ಬಳ್ಳಾರಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರಿಂದ ಯಡಿಯೂರಪ್ಪ ತೀವ್ರವಾಗಿ ಬಳಲಿಸಿದ್ದರು. ಇದೇ ವೇಳೆ ಗಂಟಲು ಬೇನೆ, ಕೆಮ್ಮು, ಜ್ವರ ಅವರನ್ನು ಬಾಧಿಸಿತ್ತು.
ಬಳ್ಳಾರಿಯ ಧೂಳು ಅವರ ಆರೋಗ್ಯದ ಮೇಲೆ ತುಸು ಮಾರಕ ಪ್ರಭಾವ ಬೀರಿದ್ದು ಎದೆಗೂಡಿನಲ್ಲಿ ಕಫ ಸಂಗ್ರಹಣೆ ಹೆಚ್ಚಾಗಿತ್ತು. ಹೀಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ವಿವರಿಸಿವೆ.












Click it and Unblock the Notifications