ವೈದ್ಯರ ನಿರ್ಲಕ್ಷ್ಯದಿಂದ ಗುಲ್ಬರ್ಗದಲ್ಲಿ ಮಹಿಳೆ ಸಾವು

ಇವರು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಗುಲಬರ್ಗಾದ ಶೋಭಾ ಹೆರಿಗೆ ಆಸ್ಪತ್ರೆಗೆ ನ.22ರಂದು ದಾಖಲಾಗಿದ್ದರು. ವೈದ್ಯರು ಸರಿಯಾಗಿ ಆಫರೇಷನ್ ಮಾಡದೆ ನಿರ್ಲಕ್ಷ್ಯದ ಕಾರಣ ಶಸ್ತ್ರಚಿಕಿತ್ಸೆ ಮಾಡಿದ ಜಾಗದಲ್ಲಿ ತೀವ್ರ ರಕ್ತ ಸ್ರಾವವಾಗಿದೆ.
ಡಾ.ಶೋಭಾ ಪಾಟೀಲ ಎಂಬ ವೈದ್ಯರು ಖುದ್ದಾಗಿ ಸಿದ್ದಗಂಗಾ ಸಂಜೀವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿಸಿದ್ದಾರೆ. ಅಲ್ಲಿಯೂ ಗುಣಮುಖರಾಗದೆ ನ.24ರಂದು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಸುತ್ತಾರೆ. ಸಾವು ಬದುಕಿನ ನಡುವೆ ಹೋರಾಡಿದ ಶರಣಮ್ಮ ನ.28ರಂದು ಮೃತಪಟ್ಟಿದ್ದಾರೆ.
ತನ್ನ ಪತ್ನಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಶರಣಮ್ಮನ ಗಂಡ ಹುಲುಗಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗುಲ್ಬರ್ಗ ಪೊಲೀಸರು ಐಪಿಸಿ ಸೆಕ್ಷನ್ 269, 337, 338 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. (ಒನ್‍ಇಂಡಿಯಾ ಕನ್ನಡ)












Click it and Unblock the Notifications