ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಸಿಸಲು 'ನಮ್ಮ' ಬೆಂಗಳೂರು ಅತ್ಯುತ್ತಮ ನಗರ

By Prasad
|
Google Oneindia Kannada News

Bangalore best city to live in India
ಬೆಂಗಳೂರು, ನ. 30 : ದೆಹಲಿ, ಮುಂಬೈ, ಕೊಲ್ಕತಾ ಮತ್ತು ಚೆನ್ನೈ ಮೆಟ್ರೊಪಾಲಿಟನ್ ನಗರಗಳನ್ನು ಹಿಂದಿಕ್ಕಿ ಭಾರತದ ಮಾಹಿತಿ ತಂತ್ರಜ್ಞಾನ ಚಟುವಟಿಕೆಯ ಕೇಂದ್ರವಾಗಿರುವ 'ನಮ್ಮ' ಬೆಂಗಳೂರು ವಾಸಿಸಲು ದೇಶದಲ್ಲಿಯೇ ಅತ್ಯುತ್ತಮ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜಾಗತಿಕ ಮಾನವ ಸಂಪನ್ಮೂಲ ಸಂಸ್ಥೆ ಮರ್ಸರ್ ಕಂಪನಿ ನಡೆಸಿದ ಸಮೀಕ್ಷೆಯಿಂದ ಈ ಸಂಗತಿ ತಿಳಿದುಬಂದಿದೆ. ಜನರ ಜೀವನಮಟ್ಟ ಜಗತ್ತಿನ ಯಾವ್ಯಾವ ನಗರದಲ್ಲಿ ಹೇಗಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಲಾಗಿತ್ತು. ಬೆಂಗಳೂರು ಭಾರತದ ಅತ್ಯುತ್ತಮ ನಗರವಾಗಿದ್ದರೂ ಜಾಗತಿಕ ಉತ್ತಮ ನಗರಗಳ ಪಟ್ಟಿಯಲ್ಲಿ 141ನೇ ಸ್ಥಾನದಲ್ಲಿದೆ.

221 ನಗರಗಳಲ್ಲಿ ವಿಯೆನ್ನಾ ಮೊದಲನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳನ್ನು ಜ್ಯುರಿಚ್, ಆಕ್ಲೆಂಡ್, ಮ್ಯುನಿಚ್, ಡಸೆಲ್‌ಡಾರ್ಫ್, ವ್ಯಾಂಕುವರ್, ಫ್ರಾಂಕ್‌ಫರ್ಟ್, ಜಿನೀವಾ, ಕೋಪನ್‌ಹೇಗನ್ ಮುಂತಾದ ನಗರಗಳು ಪಡೆದಿವೆ. ವೈಯಕ್ತಿಕ ಭದ್ರತಾ ದೃಷ್ಟಿಯಿಂದ ಲಕ್ಸೆಂಬರ್ಗ್ ಅಗ್ರಸ್ಥಾನ ಆಕ್ರಮಿಸಿದೆ.

ಭದ್ರತೆಯ ವಿಷಯದಲ್ಲಿಯೂ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಚೆನ್ನೈ ಉಳಿದ ಭಾರತೀಯ ನಗರಗಳಿಗಿಂತ ಮೇಲ್ಮಟ್ಟದಲ್ಲಿದೆ. 117ನೇ ಸ್ಥಾನದಲ್ಲಿ ಬೆಂಗಳೂರಿದ್ದರೆ, ದೆಹಲಿ ಮತ್ತು ಕೊಲ್ಕತಾ 127, ಮುಂಬೈ 142ನೇ ಸ್ಥಾನದಲ್ಲಿದೆ. ಚೆನ್ನೈ 108ನೇ ಸ್ಥಾನದಲ್ಲಿದೆ. ಬೆಂಗಳೂರಿಗೆ ಉತ್ತಮ ನಗರ ಎಂಬ ಹಣೆಪಟ್ಟಿಯೇನೋ ಸಿಕ್ಕಿದೆ. ಆದರೆ, ಇದು ವರವೋ? ಶಾಪವೋ?

English summary
Survey by HR consultancy major Mercer : Pipping past the four metro cities of New Delhi, Mumbai, Kolkata and Chennai, the southern technology hub Bangalore has emerged as the best city to live in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X