ನಾವೂ ಗಂಡಸರಿದ್ದೇವೆ, ರಾಮುಲುಗೆ ಈಶ್ವರಪ್ಪ ಸವಾಲ್

Ramulu-KSE
ಬಳ್ಳಾರಿ, ನ 29: ಬಳ್ಳಾರಿ ಉಪಚುನಾವಣೆಯ ಸಂದರ್ಭದಲ್ಲಿ ರಾಜಕೀಯ ನಾಯಕರುಗಳ ಸೊಂಟದ ಮೇಲಿನ ಮತ್ತು ಕೆಳಗಿನ ಮಾತಿನ ವಾಗ್ಯುದ್ದ ತಾರಕಕ್ಕೇರಿದೆ. ಮೂಲ ಬಿಜೆಪಿ ಕಾರ್ಯಕರ್ತರು ಮನೆಮನೆಗೆ ಹೋಗಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

'ನಾವು ಎಲ್ಲಾ ಆಟಕ್ಕೂ ಸಿದ್ದ, ನಾವೇನು ಕೈಗೆ ಬಳೆ ತೊಟ್ಟಿಕೊಂಡಿಲ್ಲ, ನಾವೂ ಗಂಡಸರಿದ್ದೇವೆ ಎನ್ನುವುದು ಶ್ರೀರಾಮುಲುವಿಗೆ ತಿಳಿದಿರಲಿ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು 'ಸ್ವಾಭಿಮಾನಿ' ಶ್ರೀರಾಮುಲುವಿಗೆ ಓಪನ್ ಚ್ಯಾಲೆಂಜ್ ಮಾಡಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಳ್ಳಾರಿ ಜಿಲ್ಲೆಯ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಸಾವಿರ ಕೋಟಿ ರೂಪಾಯಿಯ ಮಾತು ಹಾಗಿರಲಿ, ಕೋಟಿ ರೂಪಾಯಿಯ ಅಭಿವೃದ್ದಿ ಕೆಲಸ ಜಿಲ್ಲೆಯಲ್ಲಿ ಅನುಷ್ಠಾನ ಗೊಂಡಿಲ್ಲ. ಈ ಚುನಾವಣಾ ಪ್ರಕ್ರಿಯೆ ಮುಗಿದ ತಕ್ಷಣ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಈಶ್ವರಪ್ಪ ಶ್ರೀರಾಮುಲುವಿಗೆ ಎಚ್ಚರಿಕೆ ನೀಡಿದ್ದಾರೆ.

ಬಳ್ಳಾರಿಯ ತ್ರಿಮೂರ್ತಿ ರೆಡ್ಡಿಗಳು ಮತ್ತು ರಾಮುಲು ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆಂದು ತಪ್ಪು ಕಲ್ಪನೆ ಮಾಡಿಕೊಂಡು ನಾವು ಈ ಕಡೆ ಚಿತ್ತ ಹರಿಸಿರಲಿಲ್ಲ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ಶೌಚಾಲಯದ ವ್ಯವಸ್ಥೆ ಕೂಡಾ ಇಲ್ಲ. ರಸ್ತೆಗಳು ಕುಲಗೆಟ್ಟು ಹೋಗಿವೆ. ನಮ್ಮಿಂದ ತಪ್ಪಾಗಿದೆ ಕ್ಷಮಿಸಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಚುನಾವಣೆಯ ಮುನ್ನಾದಿನ ನಡೆಯುವ ಅಕ್ರಮಗಳನ್ನು ನಮ್ಮ ಕಾರ್ಯಕರ್ತರು ತಡೆಗಟ್ಟುತ್ತಾರೆ. ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆಗದಂತೆ ನೋಡಿ ಕೊಳ್ಳಲು ನಾವೆಲ್ಲರೂ ಕಟಿಬದ್ದರಾಗಿದ್ದೇವೆ. ನಮ್ಮ ಪಕ್ಷದ ಹಿರಿಯ ನಾಯಕರು ಬಳ್ಳಾರಿ ನಗರದಿಂದ ಹೋರಾಟ ಮೇಲೆ ಅಕ್ರಮ ನಡೆಸ ಬಹುದೆಂದು ರಾಮುಲು ಯೋಜನೆ ಹಾಕಿದ್ದರೆ ಅದನ್ನು ವಿಫಲ ಗೊಳಿಸುತ್ತೇವೆ ಎಂದು ಈಶ್ವರಪ್ಪ ಸವಾಲೆಸೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+