ರೆಡ್ಡಿ ಕಡು ವಿರೋಧಿ ಟಪಾಲ್ ಗಣೇಶ್ ಬಿಜೆಪಿಗೆ ಎಂಟ್ರಿ
ಬಳ್ಳಾರಿ,
ನ 28: ಪ್ರಮುಖ ಗಣಿ ಉದ್ಯಮಿ, ರೆಡ್ಡಿಗಳ ಕಡು ವಿರೋಧಿ ಟಪಾಲ್ ಗಣೇಶ್ ಅವರು ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಮಾಗಿಯ ಚಳಿಯಲ್ಲಿ ಕಮಲ ಪಕ್ಷವನ್ನು ಅಪ್ಪಿಕೊಂಡಿದ್ದಾರೆ. ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಅಪರೇಷನ್ ಕಮಲದ ಫಲ ಇದಾಗಿದೆ. ಬಿಜೆಪಿಯ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಸಮ್ಮುಖದಲ್ಲಿ ಅವರು ಅಧಿಕೃತವಾಗಿ ಪಕ್ಷ ಸೇರಿಕೊಂಡರು. id="toptextpromo">ಈ
ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪ, ಈ ಭಾಗದ ಪ್ರಭಾವಿ ನಾಯಕ ಟಪಾಲ್ ಗಣೇಶ್ ಬಿಜೆಪಿ ಸೇರಿರುವುದು ಸಂತಸ ತಂದಿದ್ದು, ಇನ್ನೂ ಅನೇಕರು ಬಿಜೆಪಿಗೆ ಸೇರಲಿದ್ದಾರೆ ಎಂದರು. id='are-slot-1' class='oiad oi-axt oiadv'> id='top-searched-articles'>ಇದೇ
ವೇಳೆ, ಜೆಡಿಎಸ್ ಬಳ್ಳಾರಿ ಜಿಲ್ಲಾಧ್ಯಕ್ಷ ಸೂರ್ಯನಾರಾಯಣ ರೆಡ್ಡಿ ಅವರೂ ಬಿಜೆಪಿಯತ್ತ ಒಲವು ತೋರಿದ್ದಾರೆ. ಇದರಿಂದ ಉಪ ಚುನಾವಣೆಯಲ್ಲಿ ಜೆಡಿಎಸ್ ಮತಗಳು ಬಿಜೆಪಿಯತ್ತ ವಾಲುವ ಲಕ್ಷಣಗಳು ಗೋಚರಿಸುತ್ತಿವೆ. ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದರಿಂದ ಅತೃಪ್ತರಾದ ಸೂರ್ಯನಾರಾಯಣ ರೆಡ್ಡಿ ಅವರು ಬಿಜೆಪಿ ಅಭ್ಯರ್ಥಿ ಪರ ನಿಲ್ಲುವಂತೆ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.











Click it and Unblock the Notifications