ಕನಿಮೋಳಿಗೆ ಕೊನೆಗೂ ಜಾಮೀನು ಮಂಜೂರು

ಸುಮಾರು 6 ತಿಂಗಳಿನಿಂದ ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಡಿಎಂಕೆ ಸಂಸದೆ, ಕರುಣಾನಿಧಿ ಅವರ ಪುತ್ರಿ ಕನಿಮೋಳಿ ಅವರ ಜೊತೆ ಇತರೆ ನಾಲ್ವರು ಆರೋಪಿಗಳಿಗೂ ಜಾಮೀನು ಮಂಜೂರಾಗಿದೆ. ಮೇ.20 ರಿಂದ ಕನಿಮೋಳಿ ಅವರು ತಿಹಾರ್ ಜೈಲಿನಲ್ಲಿದ್ದರು.
ಮಾಜಿ ಟೆಲಿಕಾಂ ಕಾರ್ಯದರ್ಶಿ ಸಿದ್ದಾರ್ಥ ಬೆಹೂರಾ ಅವರನ್ನು ಹೊರತುಪಡಿಸಿ ಉಳಿದ ಆರೋಪಿಗಳಿಗೆ ನ್ಯಾ. ಶಾಲಿ ಅವರು ಜಾಮೀನು ಮಂಜೂರು ಮಾಡಿದ್ದಾರೆ.
ಕನಿಮೋಳಿ ಜೊತೆಗೆ ಆಸೀಫ್ ಬಲ್ವ, ಸಿನಿಯುಗ್ ನ ಸಹ ಸ್ಥಾಪಕ ಕರೀಂ ಮೊರಾನಿ, ಕಲೈಂಗರ್ ಟಿವಿ ಎಂಡಿ ಶರತ್ ಕುಮಾರ್ ಹಾಗೂ ರಾಜೀವ್ ಅಗರ್ ವಾಲ್ ಅವರಿಗೂ ಬೇಲ್ ಸಿಕ್ಕಿದೆ. ಷರತ್ತುಬದ್ಧ ಜಾಮೀನು ಪಡೆದಿರುವ ಆರೋಪಿಗಳು 1 ಲಕ್ಷ ರೂ ಬಾಂಡ್ ಸಲಿಸಬೇಕು, ದೇಶ ಬಿಟ್ಟು ಹೊರಗೆ ಹೋಗುವಂತಿಲ್ಲ ಎಂದು ಕೋರ್ಟ್ ನಿರ್ದೇಶನ ನೀಡಿಎ.
ಇದಕ್ಕೂ ಮುನ್ನ ಕಾರ್ಪೋರೇಟ್ ಗಳಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿತ್ತು, ಯುನಿಟೆಕ್ ವೈರ್ ಲೆಸ್ ನ ಸಂಜಯ್ ಚಂದ್ರ, ಸ್ವಾನ್ ಟೆಲಿಕಾಂನ ವಿನೋದ್ ಗೋಯೆಂಕಾ, ರಿಲಯನ್ಸ್ ಗ್ರೂಪ್ ನ ಗೌತಮ್ ದೋಶಿ, ಸುರೇಂದ್ರ ಪಿ ಹಾಗೂ ಹರಿ ನಾಯರ್ ಅವರಿಗೆ 2 ಜಿ ಸ್ಪ್ರೆಕ್ಟಂ ಹಗರಣದಲ್ಲಿ ಜಾಮೀನು ಮಂಜೂರಾಗಿದೆ.












Click it and Unblock the Notifications