ಬಳ್ಳಾರಿ ಚುನಾವಣೆ: ಮುಸ್ಲಿಮರ ಮತ ಗೆದ್ದೋನೇ ಬಾಸು

bellary-rural-bypolls-muslim-votes-crucial
ಬಳ್ಳಾರಿ, ನ 28: ಬಳ್ಳಾರಿ ಗ್ರಾಮೀಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಹಿರಂಗ ಪ್ರಚಾರ ಸೋಮವಾರ ಅಂತ್ಯವಾಗಲಿದ್ದು, ಮುಸ್ಲಿಂ ಮತದಾರರ ಒಲವು ಯಾರತ್ತ ಎಂಬುದು ನಿಗೂಢವಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಮುಸ್ಲಿಂ ಮತದಾರರ ಮತಗಳು ವಿನ್ನಿಂಗ್ ಎಡ್ಜ್ ಆಗಿದ್ದು, ನಿರ್ಣಾಯಕವಾಗಿದೆ. ಯಾವ ಅಭ್ಯರ್ಥಿ ಈ ವೋಟುಗಳನ್ನು ತನ್ನದಾಗಿಸಿಕೊಳ್ಳುತ್ತಾರೋ ಅವರಿಗೆ ಗೆಲುವು ಸಾಧ್ಯವಾಗಲಿದೆ.

ಮುಸ್ಲಿಂ ಮತಗಳನ್ನು ಕಾಂಗ್ರೆಸ್ ಮತ್ತು ಶ್ರೀರಾಮುಲು ತಮ್ಮದಾಗಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಬಿಜೆಪಿ ಸಹ ಹಿಂದೆ ಬಿದ್ದಿಲ್ಲ. ಕ್ಷೇತ್ರದಲ್ಲಿ 35,000 ಮುಸ್ಲಿಂ ಮತದಾರರಿದ್ದಾರೆ. ಅಭ್ಯರ್ಥಿಯ ಹಣೆಬರೆಹ ನಿರ್ಧರಿಸುವುದು ಇವೇ ಮತಗಳು. ಗ್ರಾಮೀಣ ಭಾಗದ ಜತೆಗೆ ಕೌಲ್ ಬಜಾರಿನ ಮುಸಲ್ಮಾನರ ವೋಟುಗಳನ್ನು ಸಂಪಾದಿಸುವವರಿಗೆ ಗೆಲುವು ಕಟ್ಟಿಟ್ಟಬುತ್ತಿ ಎನ್ನಬಹುದು.

ಇಂಥ ಪರಿಸ್ಥಿತಿಯಲ್ಲಿ ಶ್ರೀರಾಮುಲು ತಮ್ಮ ಪರವಾಗಿ ಟಿಪ್ಪೂ ಸುಲ್ತಾನ್ ವಂಶಸ್ಥ ಪ್ರಿನ್ಸ್ ಅನ್ಸರ್ ಅಲಿ ಷಾ ಅವರನ್ನೇ ಸಾಕ್ಷಾತ್ ಠಿಕಾಣಿ ಹೂಡಿಸಿದ್ದಾರೆ. ಜತೆಗೆ ಶ್ರೀರಾಮುಲುಗೆ ಕುಮಾರಣ್ಣ ಬೆಂಬಲ ಘೋಷಿಸುತ್ತಿದ್ದಂತೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಕ್ಷೇತ್ರದ ಮುಸ್ಲಿಂ ಬಾಂಧವರ ಮಧ್ಯೆ ಓಡಾಡಿದ್ದಾರೆ. ಇನ್ನು, ಕಾಂಗ್ರೆಸ್ ಸಿ ಎಂ ಇಬ್ರಾಹಿಂ, ರೋಶನ್ ಬೇಗ್, ಸಿಕೆ ಜಾಫರ್ ಷರೀಫ್ ಅಂತಹ ಹಳೆಯ ಮುಖಗಳಿಗೆ ಮಣೆ ಹಾಕಿದೆ.

ಆದರೆ ಈ ಕ್ಷೇತ್ರದ ವಾರ್ಡುಗಳಲ್ಲಿ ಬರುವ ಎಲ್ಲ 7 ಮುಸ್ಲಿಂ ಕಾರ್ಪೊರೇಟರುಗಳು ಬಿಜೆಪಿಯವರಾಗಿದ್ದು, ಬಿಜೆಪಿಗೇ ತಮ್ಮ ನಿಷ್ಠೆ ಪ್ರದರ್ಶಿಸಿದ್ದಾರೆ. ಇದಕ್ಕೆ ಕಾರಣಕರ್ತರಾಗಿರುವ ಯಡಿಯೂರಪ್ಪ ಈಗಾಗಲೇ ಮುಗುಳ್ನಗೆ ಬೀರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+