ಮತ್ತೊಬ್ಬ ಭ್ರಷ್ಟ ಪೊಲೀಸ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಅತಿಥಿ

ಕೇವಲ ಎರಡು ತಿಂಗಳ ಹಿಂದೆ ಅಮೃತಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ರತ್ನಾಕರ ಶೆಟ್ಟಿ ಎಂಬ ಮಹಾನುಭಾವ ಲೋಕಾಯುಕ್ತ ದಾಳಿಗೆ ಹೆದರಿ ಇಲಾಖೆಯ ವಾಕಿಟಾಕಿಯೊಂದಿಗೆ ಕಳ್ಳನಂತೆ ಪರಾರಿಯಾಗಿದ್ದ. ಅವರ ವಾರಿಗೆಯವರು ಇದರಿಂದ ಕಿಂಚಿತ್ತೂ ಎಚ್ಚೆತ್ತಂತೆ ಕಾಣುತ್ತಿಲ್ಲ.
ಕೆಂಗೇರಿ ಪೊಲೀಸ್ ಠಾಣೆಯ ಟ್ರಾಫಿಕ್ ಇನ್‌ಸ್ಪೆಕ್ಟರ್ ವಾಸುದೇವ ನಾಯಕ್, ವಶಕ್ಕೆ ಪಡೆದಿದ್ದ ಎರಡು ಲಾರಿಗಳನ್ನು ಬಿಡುಗಡೆ ಮಾಡಲು 1.25 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾರೆ. ಗಮನಾರ್ಹವೆಂದರೆ ಈ ಭ್ರಷ್ಟ ಇನ್‌ಸ್ಪೆಕ್ಟರುಗಳು ಅಡ್ಡಕಸುಬಿಗೆ ನೆರವಾಗಲೆಂದು ತಮ್ಮ ಅತ್ಯಂತ ನಂಬುಗೆಯ ಬಂಟರನ್ನು ಇಟ್ಟುಕೊಂಡಿರುತ್ತಾರೆ. ಹೆಚ್ಚಾಗಿ ತಮ್ಮ ಊರಿನವರೋ ಅಥವಾ ಜಾತಿಬಾಂಧವರೋ ಇಂತಹ ಕಾರ್ಯಾಚರಣೆಗೆ ನೆರವಾಗುತ್ತಾರೆ.
ಕೆಂಗೇರಿ ಠಾಣೆಯ ಇನ್‌ಸ್ಪೆಕ್ಟರ್ ವಿಷಯದಲ್ಲೂ ಇದೇ ಆಗಿದೆ. ತಮ್ಮ ಊರಿನವ ಕಮ್ ಜಾತಿಬಾಂಧವ ಗಣೇಶ್ ನಾಯಕ್ ಎಂಬುವವನು ಮಧ್ಯವರ್ತಿಯಾಗಿ ಪ್ರಕರಣವೊಂದರಲ್ಲಿ ಇನ್‌ಸ್ಪೆಕ್ಟರ್ ವಾಸುದೇವ ನಾಯಕ್ ಪರ 1.25 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆ ಬೀಸಿದೆ. ಆದರೆ ಈ ತಿಮಿಂಗಲ ಬಲೆಗೆ ಬೀಳದೆ ಪರಾರಿಯಾಗಿದೆ. ಅದೂ ಲಂಚದ ಮಾಲು ಸಮೇತ. ಆದರೆ ಅದಷ್ಟೂ ಘಟನಾವಳಿ ವಿಡಿಯೋ ಆಗಿದೆ. ಇನ್ನು ಇನ್‌ಸ್ಪೆಕ್ಟರ್ ವಾಸುದೇವ ನಾಯಕ್ ಅಂತೂ ಲೋಕಾಯುಕ್ತ ಬಲೆಯಲ್ಲಿ ಸಿಕ್ಕಿ ವಿಲವಿಲ ಒದ್ಲಾಡುತ್ತಿದ್ದಾರೆ.












Click it and Unblock the Notifications