ಆಯುಕ್ತ ಸಿದ್ದಯ್ಯ ಕೂಡಾ ಸಿಎ ಸೈಟು ಹೊಡೆದಿದ್ದಾನಯ್ಯ
ಬೆಂಗಳೂರು,
ನ.25: ಶಿಸ್ತಿನ ಸಿಪಾಯಿ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಅವರ ಮೇಲೆ ಬಿಟ್ಟಿ ಸೈಟು ಪಡೆದ ಆರೋಪ ಎದುರಾಗಿದೆ. ಸಿದ್ದಯ್ಯ ಅವರು ತಮ್ಮ ಪತ್ನಿ ಮಂಜುಳಾ ಅವರ ಹೆಸರಿನಲ್ಲಿ ಎರಡು CA ನಿವೇಶನ ಪಡೆದುಕೊಂಡಿದ್ದಾರೆ ಎಂದು ಈ ಸಂಜೆ ವರದಿಮಾಡಿದೆ. id="toptextpromo">ಬನಶಂಕರಿ
ಮೂರನೇ ಹಂತ 5ನೇ ಬ್ಲಾಕ್ 100ನೇ ಅಡ್ಡ ರಸ್ತೆಯಲ್ಲಿರುವ ಕೌಟಿಲ್ಯ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾಗಿದ್ದ ಮಂಜುಳಾ ಸಿದ್ದಯ್ಯ ಅವರು ಬಿಡಿಎಗೆ ಪತ್ರ ಬರೆದು ತಮ್ಮ ಸಂಘಕ್ಕೆ ನಿವೇಶನ ಮಂಜೂರು ಮಾಡುವಂತೆ ಕೋರಿದ್ದರು. id='are-slot-1' class='oiad oi-axt oiadv'> id='top-searched-articles'>ಇದರಂತೆ
ಅಂಜನಾಪುರದಲ್ಲಿ ಸಿಎ ನಿವೇಶನ 4 ಹಾಗೂ ಬನಶಂಕರಿ 6 ನೇ ಹಂತದಲ್ಲಿ ಮತ್ತೊಂದು ನಿವೇಶನ ಮಂಜೂರು ಮಾಡಲಾಗಿದೆ. ಸಾವಿರಾರು ಚದರ ಆಡಿ ವಿಸ್ತೀರ್ಣ ಇರುವ ಕೋಟಿಗಟ್ಟಲೆ ಬೆಲೆ ಬಾಳುವ ನಿವೇಶನಗಳನ್ನು ಕಾನೂನು ನಿಯಮ ಮೀರಿ ಮಹಿಳಾ ಸಂಘಕ್ಕೆ ಸಿಗುವಂತೆ ಆಯುಕ್ತ ಸಿದ್ದಯ್ಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.











Click it and Unblock the Notifications