ಕಂಬಾರರಿಂದ ಜ್ಞಾನಪೀಠ ಕಿತ್ತುಕೊಳ್ಳಿ : ಠಾಕ್ರೆ ಕಿಡಿನುಡಿ

"ಕರ್ನಾಟಕದ ಗಡಿ ಪ್ರದೇಶದಲ್ಲಿರುವ ಮರಾಠಿಗರು ಹುಟ್ಟಿದ್ದೇ ದಂಗೆ ಎಬ್ಬಿಸಲು ಎಂದು ಕಂಬಾರರು ಹೇಳಿದ್ದಾರೆ. ಮರಾಠಿ ಜನರಿಗೆ ತಮ್ಮ ಮಾತೃ ಭಾಷೆಯಲ್ಲಿ ಶಿಕ್ಷಣ ಬೇಕಿದ್ದರೆ ಮಹಾರಾಷ್ಟ್ರಕ್ಕೆ ಹೋಗಬೇಕು ಎಂದು ಕೆಣಕಿದ್ದಾರೆ" ಎಂದು ಠಾಕ್ರೆ ತಮ್ಮ ಮುಖವಾಣಿ 'ಸಾಮ್ನಾ' ಪತ್ರಿಕೆಯ ಸಂಪಾದಕೀಯದಲ್ಲಿ ಕಿಡಿಕಾರಿದ್ದಾರೆ.
ನೌಕರಿಗೆಂದು ಕರ್ನಾಟಕದ ಲಕ್ಷಾಂತರ ಜನರು ಮುಂಬೈ ಮತ್ತು ಮಹಾರಾಷ್ಟ್ರದ ಅನೇಕ ಕಡೆಗಳಲ್ಲಿ ವಾಸವಾಗಿದ್ದಾರೆ. ಮುಂಬೈನ ಹೊಟೇಲ್ ಉದ್ಯಮವನ್ನು ಉಡುಪಿಯವರು ಆಳುತ್ತಿದ್ದಾರೆ. ಅವರೆಲ್ಲರನ್ನು ತಮ್ಮ ಊರಿಗೆ ವಾಪಸ್ ಕಳಿಸಿದರೆ ಏನಾಗುತ್ತದೆ ಎಂದು ಕನ್ನಡಿಗರನ್ನು ಎಚ್ಚರಿಸಿದ್ದಾರೆ.
ಭಾಷೆಯೆಂಬುದು ಯಾರ ವೈರಿಯೂ ಅಲ್ಲ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಗಿರೀಶ್ ಕಾರ್ನಾಡ್, ಡಾ. ಶಿವರಾಮ್ ಕಾರಂತ್, ಡಾ. ಯುಆರ್ ಅನಂತಮೂರ್ತಿಯಂಥ ದಿಗ್ಗಜರು ಮರಾಠಿಗರ ಮೇಲೆ ಛಾಪು ಮೂಡಿಸಿದ್ದಾರೆ ಎಂಬುದು ಕಂಬಾರರಿಗೆ ತಿಳಿದಿರಲಿ ಎಂದು ಕಿಡಿನುಡಿಯಾಡಿದ್ದಾರೆ.
ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿ ನಡುವಿನ ಕದನಕ್ಕೆ ಮತ್ತೆ ಕಹಳೆ ಊದಲಾಗಿದೆ. ಕನ್ನಡ ವಿರೋಧಿ ಹೇಳಿಕೆ ನೀಡುತ್ತ ಜನರನ್ನು ಕೆಣಕುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರಭುತ್ವವಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಏಕೆ ವಿಸರ್ಜಿಸಬಾರದು ಎಂದು ಕೇಳಿ ಕರ್ನಾಟಕ ಸರಕಾರ ಶೋಕಾಸ್ ನೋಟೀಸ್ ಜಾರಿ ಮಾಡಿದೆ.












Click it and Unblock the Notifications