ಶಿವಮೊಗ್ಗದ ಅನರ್ಹ ಪತ್ರಕರ್ತರಿಗೆ ನಿವೇಶನ ; ತಡೆಯಾಜ್ಞೆ
ಶಿವಮೊಗ್ಗ,
ನ. 24 : ಜಿಲ್ಲಾ ಪತ್ರಕರ್ತರಿಗೆ ಮತ್ತು ಪತ್ರಿಕಾ ಉದ್ಯೋಗಿಗಳಿಗೆ ಸೋಮಿನಕೊಪ್ಪದಲ್ಲಿ ಹಂಚಲಾಗಿರುವ ನಿವೇಶನಗಳ ನೊಂದಣಿ ಮಾಡಿಕೊಳ್ಳುವುದನ್ನು ಕೂಡಲೆ ನಿಲ್ಲಿಸಲಾಗಿದೆ ಎಂದು ಕರ್ನಾಟಕ ಗೃಹ ಮಂಡಳಿಯ ಜಿಲ್ಲಾ ಯೋಜನಾ ಕಚೇರಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. id="toptextpromo">ಪತ್ರಕರ್ತರ
ಸೋಗಿನಲ್ಲಿ ಬಂದ ಅನೇಕ ಅನರ್ಹರಿಗೆ ನಿವೇಶನ ಹಂಚಲಾಗಿದೆ ಎಂದು ದೂರುಗಳು ಬಂದಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶಿವಮೊಗ್ಗ ಉಪ ವಿಭಾಗದ ಜಿಲ್ಲಾ ಯೋಜನಾ ಕಚೇರಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇದು
ಇತ್ಯರ್ಥವಾಗುವವರೆಗೆ ಹೊಸ ನಿವೇಶನಗಳನ್ನು ಹಂಚಬಾರದು ಮತ್ತು ಈಗಾಗಲೆ ಹಂಚಲಾಗಿರುವ ನಿವೇಶನಗಳ ನೊಂದಣಿ ಮಾಡಬಾರದು ಎಂದು ಕೇಂದ್ರ ಕಚೇರಿಯಿಂದ ಬಂದ ಆದೇಶದಲ್ಲಿ ತಿಳಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.











Click it and Unblock the Notifications