ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ನರ್ಸಿಂಗ್ ಹೋಂಗಳ ಮೇಲೆ ಐಟಿ ದಾಳಿ

By Srinath
|
Google Oneindia Kannada News

income-tax-raids-on-mangalore-doctors
ಮಂಗಳೂರು, ನ 23: ಬೆಂಗಳೂರಿನಿಂದ ಬುಧವಾರ ಬೆಳಗ್ಗೆ ಆಗಮಿಸಿದ ಆದಾಯ ತೆರಿಗೆ ಇಲಾಖೆಯ 150ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಭರ್ಜರಿ ಬೇಟೆಯಾಡುತ್ತಿದೆ. ಒಟ್ಟು 6 ವೈದ್ಯರ ಮೇಲೆ ತಂಡ ದಾಳಿ ನಡೆಸಿದೆ.

ಡಾ ಇಸ್ಮಾಯಿಲ್, ಡಾ ರವೀಶ್ ತುಂಗಾ, ಡಾ ಪುರುಷೋತ್ತಮ್, ಡಾ ಹನ್ಸ್ ರಾಜ್ ಆಳ್ವಾ, ಡಾ ಆರ್ಎಲ್ ಕಾಮತ್ ಮತ್ತು ಡಾ ಯೂಸುಫ್ ಕುಂಬ್ಲೆ ಐಟಿ ದಾಳಿಗೊಳಗಾದ ವೈದ್ಯ ಮಹಾಶಯರು. ಇವರೆಲ್ಲ ಇಲ್ಲಿನ ಪಂಪ್ ವೆಲ್ ಬಳಿಯಿರುವ ಇಂಡಿಯಾನಾ ಹಾಸ್ಪಿಟಲ್ ಗೆ ಸೇರಿದವರಾಗಿದ್ದಾರೆ.

ಈ ಮಧ್ಯೆ, ಇಂಡಿಯಾನಾ ಹಾಸ್ಪಿಟಲ್ ಮೇಲೆ ಐಟಿ ದಾಳಿ ನಡೆದಿದೆಯಂತೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಅನೇಕ ಮಂದಿ ಸಂತೋಷ ವ್ಯಕ್ತಪಡಿಸಿದ್ದಾರೆ. ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯ ಈ ವೈದ್ಯರು ಭಾರಿ ಪ್ರಮಾಣದಲ್ಲಿ ಕಾಸು ಕೀಳುತ್ತಿದ್ದರು. ಅವರಿಗೀಗ ತಕ್ಕ ಶಾಸ್ತಿಯಾಗಿದೆ ಎಂದು ಬಾಧಿತರು ಸಂತಸ ವ್ಯಕ್ತಪಡಿಸಿದ್ದಾರೆ.

ಐಟಿ ಅಧಿಕಾರಿಗಳ ದಾಳಿ ಇನ್ನೂ ಮುಂದುವರಿದಿದ್ದು, ನಗರದ ಡಾಕ್ಟರ್ಸ್ ಕಾಲನಿ, ವಾಟರ್ ವುಡ್ಸ್ ಮತ್ತು ಕೈಬತ್ತಲು ಬಡಾವಣೆಗಳಲ್ಲಿರುವ ಇವರ ನಿವಾಸಗಳ ಮೇಲೂ ದಾಳಿ ನಡೆಯುತ್ತಿದೆ. ಒಟ್ಟು 8 ಕ್ಲಿನಿಕ್ ಗಳ ಮೇಲೆ ದಾಳಿ ನಡೆದಿದೆ.

English summary
A team of 150 IT department officials from Bangalore swooped down on six doctors in the Mangalore city on the morning of Wednesday November 23. The doctors are Dr Ismail, Dr Ravish Thunga, Dr Purushottam, Dr Hansraj Alva, Dr R L Kamath and Dr Yusuf Kumble, all connected to Indiana Hospital in Pumpwell.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X