ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಆಟೋ ಚಾಲಕರ ಬೇಡಿಕೆ ಕನಿಷ್ಠ 24 ರು.

By Prasad
|
Google Oneindia Kannada News

Auto rickshaw drivers demand minimum fare hike
ಬೆಂಗಳೂರು, ನ. 23 : ನಗರದ ಆಟೋ ದರವನ್ನು ಕನಿಷ್ಠ 24 ರು. ಮತ್ತು ಪ್ರತಿ ಕಿ.ಮೀ.ಗೆ 12 ರು. ನಿಗದಿಪಡಿಸಬೇಕೆಂದು ಆಟೋ ರಿಕ್ಷಾ ಚಾಲಕರ ಸಂಘ ಸರಕಾರದ ಮುಂದೆ ಬೇಡಿಕೆ ಇಟ್ಟಿದೆ. ತೈಲ ಮತ್ತು ಇತರ ಭಾಗಗಳ ಬೆಲೆಗಳು ಏರಿದ್ದರೂ ಆಟೋ ದರ ಬದಲಾಗಿಲ್ಲ ಎಂಬುದು ಆಟೋ ಚಾಲಕರ ಅಂಬೋಣ.

ಆಟೋ ಗ್ಯಾಸ್ ದರ ಪ್ರತಿ ಲೀಟರಿಗೆ 38 ರು. ಇದ್ದಾಗ ಕನಿಷ್ಠ ದರ 17 ರು. ಮತ್ತು ಪ್ರತಿ ಕಿ.ಮೀ.ಗೆ 9 ರು. ನಿಗದಿಪಡಿಸಲಾಗಿತ್ತು. ಆದರೆ, ಈಗ ಲೀಟರಿಗೆ 44 ರು. ಆಗಿದ್ದು, ಕನಿಷ್ಠ ದರ ಹಿಂದಿನಂತೆಯೇ ಇದೆ ಎಂದು ಬೆಂಗಳೂರು ಉತ್ತರ ವಿಭಾಗದ ಸಂಘದ ಅಧ್ಯಕ್ಷ ರುದ್ರಮೂರ್ತಿ ಸರಕಾರವನ್ನು ಆಗ್ರಹಿಸಿದ್ದಾರೆ.

ನಗರದ ಹದಗೆಟ್ಟ ರಸ್ತೆಗಳು ತೀರ ಕೆಟ್ಟಿವೆ. ವಿಪರೀತ ವಾಹನದಟ್ಟಣೆ ಇರುವ ರಸ್ತೆಯಲ್ಲಿ 2-3 ಕಿ.ಮೀ. ಚಲಿಸಬೇಕೆಂದರೂ ಕನಿಷ್ಠ ಅರ್ಧ ಗಂಟೆಯಿಂದ ಮುಕ್ಕಾಲು ಗಂಟೆ ಬೇಕಾಗುತ್ತದೆ. ಇದರಿಂದಾಗಿ ಗಳಿಕೆ ಕಡಿಮೆಯಾಗುತ್ತಿದೆ. ಹೀಗಾದರೆ ಬೆಲೆ ಏರಿಸದೆ ಬದುಕು ಸಾಗಿಸುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ತಮ್ಮ ಬೇಡಿಕೆಯನ್ನು ಪರಿಶೀಲಿಸಿ ದರ ಏರಿಸಲು ಕೆಲ ಸಮಯ ಸರಕಾರಕ್ಕೆ ನೀಡುತ್ತೇವೆ. ದರ ಏರಿಕೆಯ ಬೇಡಿಕೆ ಈಡೇರಿಸದಿದ್ದರೆ ಮುಷ್ಕರ ಹೂಡುವ ಬಗ್ಗೆ, ಒಂದು ಸಮಿತಿ ರಚಿಸಿ ನಂತರ ತೀರ್ಮಾನಕ್ಕೆ ಬರುತ್ತೇವೆ ಎಂದು ಸರಕಾರಕ್ಕೆ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ.

English summary
Bangalore auto rickshaw drivers have asked the govt to increase the minimum fare from Rs.17 to Rs. 24 and fix Rs.12 per km. Their contention is auto gas fare is increased from Rs. 38 to Rs. 44 per litre, but minimum fare remains the same. Drivers union says that bad roads have added fuel to their bad earnings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X