ಯಡಿಯೂರಪ್ಪ ಬುಡಕ್ಕೆ ಕೊಡಲಿ ಇಟ್ಟ ವಕೀಲ ಪ್ರಶಾಂತ್!

ಸುಪ್ರೀಂಕೋರ್ಟ್ ನ ಅರಣ್ಯ ನ್ಯಾಯಪೀಠದ ಮುಖ್ಯ ನ್ಯಾಯಾಧೀಶ ಎಸ್.ಎಚ್ ಕಾಪಾಡಿಯಾ, ಜಸ್ಟೀಸ್ ಅಫ್ತಾಬ್ ಅಲಂ ಹಾಗೂ ಜಸ್ಟೀಸ್ ಸ್ವತಂತ್ರ ಕುಮಾರ್ ಅವರಿದ್ದ ನ್ಯಾಯಾಪೀಠ ಈ ಆದೇಶವನ್ನು ನೀಡಿದೆ.
NGO Samaj Parivartan Samudaya ಪರ ಸಮರ್ಥವಾಗಿ ವಾದಿಸಿದವರು ಟೀಂ ಅಣ್ಣಾದ ಸದಸ್ಯ ಹಿರಿಯ ವಕೀಲ ಪ್ರಶಾಂತ್ ಭೂಷಣ್.
ಲೋಕಾಯುಕ್ತ ವರದಿಯ ಅನ್ವಯ ಬೇಲೇಕೇರಿ ಬಂದರಿನಿಂದ ಸುಮಾರು 5.5 ಲಕ್ಷ ಟನ್ ಕಬ್ಬಿಣ ಅದಿರು ಮಾಯವಾಗಿರುವುದರ ಹಿಂದೆ ಅದಾನಿ ಸಮೂಹದ ಕೈವಾಡದ ಶಂಕೆ ವ್ಯಕ್ತವಾಗಿದೆ.
22.62.924 ರೂ ನಿಂದ 1.28.37.242 ರೂ ಲಂಚದ ಹಣ ವಿವಿಧ ಅಧಿಕಾರಿಗಳಿಗೆ ಸಂದಾಯವಾಗಿದೆ. ಸುಮಾರು 11,59,441 ಮೆಟ್ರಿಕ್ ಟನ್ ಅದಿರು ಅಕ್ರಮವಾಗಿ ರಫ್ತು ಮಾಡಲು ಅಧಿಕಾರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಪ್ರಶಾಂತ್ ದಾಖಲೆ ಸಮೇತ ವಾದಿಸಿದ್ದರು.
[ಬೇಲೇಕೇರಿ ಅಕ್ರಮಗಳ ಬಗ್ಗೆ ವರದಿ ನೋಡಿ]
ಯಡಿಯೂರಪ್ಪ ಪಾತ್ರ: ಸಿಬಿಐ ತನಿಖೆಗೆ ಆಗ್ರಹಿಸಿರುವ ಸಂಘಟನೆ ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಮನವಿಯಲ್ಲಿ ಜಿಂದಾಲ್ ಕಂಪನಿಯಿಂದ ಯಡಿಯೂರಪ್ಪನವರ ಕುಟುಂಬದ ಟ್ರಸ್ಟ್‌ಗೆ ಹಣ ಸಂದಾಯವಾಗಿರುವುದನ್ನು ಪ್ರಸ್ತಾಪಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ಜಿಂದಾಲ್ ಕಂಪನಿಗೆ ಅಸೋಷಿಯೇಟೆಡ್ ಮೈನಿಂಗ್ ಕಂಪನಿ ಅಕ್ರಮವಾಗಿ ಅದಿರನ್ನು ಸರಬರಾಜು ಮಾಡಿದೆ ಎಂದು ಆರೋಪಿಸಿದೆ. ಗಾಲಿ ಜನಾರ್ದನ ರೆಡ್ಡಿ ವಿರುದ್ಧದ ಕರ್ನಾಟಕ ಸಿಬಿಐ ತನಿಖೆ ಮುಂದುವರೆಸಲು ಅನುಮತಿ ನೀಡಿದ್ದು ಜ.12, 2012ರೊಳಗೆ ತನಿಖೆ ಮುಗಿಸುವಂತೆ ಕೋರ್ಟ್ ಆದೇಶಿಸಿದೆ.
ಅಷ್ಟೇ ಅಲ್ಲದೆ ಜಿಂದಾಲ್ ಕಂಪನಿ ಯಡಿಯೂರಪ್ಪ ಕುಟುಂಬದಿಂದ ಅತಿ ದುಬಾರಿ ದರದಲ್ಲಿ ಭೂಮಿಯನ್ನು ಖರೀದಿಸಿದೆ ಎಂದೂ ಆರೋಪಿಸಲಾಗಿದೆ. ಅಕ್ರಮ ರಫ್ತು ಮಾಡಲು ಲಂಚ ನೀಡಿರುವ ಅದಾನಿ ಎಂಟರ್‌ಪ್ರೈಸಸ್ ವಿರುದ್ಧವೂ ದೂರು ಸಲ್ಲಿಸಲಾಗಿದೆ.












Click it and Unblock the Notifications