ಜಿಂದಾಲ್ ಜೊತೆ ದೋಸ್ತಿ, ಯಡ್ಡಿಗೆ ಸಿಬಿಐ ತನಿಖೆ ಭೀತಿ?

ಜಿಂದಾಲ್ ಹಾಗೂ ಅದಾನಿ ಕಂಪನಿ ಮೇಲೆ ವರದಿ ನೀಡಲು ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಸಿಬಿಐ ತನಿಖೆಗೆ ದಾರಿ ಎಡೆಮಾಡಿಕೊಡುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ.
ಲೋಕಾಯುಕ್ತ ವರದಿ(ಸಂತೋಷ್ ಹೆಗ್ಡೆ ನೀಡಿದ ಎರಡನೆ ವರದಿ)ಯನ್ನು ಆಧಾರಿಸಿ ಸಿಬಿಐ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದರೂ ಸಿಇಸಿ ಶಿಫಾರಸ್ಸುಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಕಾನೂನು ತಜ್ಞರ ಅಭಿಪ್ರಾಯದಲ್ಲಿ ಸಿಇಸಿ ತನ್ನ ತನಿಖೆಗೆ ಬಹುಪಾಲು ಲೋಕಾಯುಕ್ತ ವರದಿಯನ್ನೇ ಆಧರಿಸುವುದರಿಂದ ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆ ಚುರುಕಾಗುವುದು ಖಚಿತ ಎನ್ನಲಾಗುತ್ತಿದೆ.
ಅಕ್ರಮ ಗಣಿಗಾರಿಕೆಯ ವಿಚಾರದಲ್ಲಿ ಸುಪ್ರೀಂಕೋರ್ಟ್ ಸಿಬಿಐ ಶಿಫಾರಸುಗಳನ್ನು ನಿರಾಕರಿಸಲಾಗುವುದಿಲ್ಲವಾದ್ದರಿಂದ ಯಡ್ಡಿ ಕುಟುಂಬದ ಪ್ರೇರಣಾ ಟ್ರಸ್ಟ್ ಜಿಂದಾಲ್ ಕಂಪನಿಯಿಂದ 30 ಕೋಟಿ ಪಡೆದಿರುವ ಪ್ರಕರಣ ಹೊಸ ತಿರುವು ಪಡೆಯಲಿದೆ. ಹಣ ಪಡೆದಿರುವುದನ್ನು ಸ್ವತಃ ಯಡಿಯೂರಪ್ಪ ಅವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಅದು ನನ್ನ ಮಕ್ಕಳ ವ್ಯವಹಾರ ನನಗೂ ಅವರಿಗೂ ಸಂಬಂಧ ಕಡೆದು ಹೋಗಿ ಸುಮಾರು ವರ್ಷ ಆಯಿತು ಎಂದು ಜಾಣತನ ಉತ್ತರ ನೀಡಿದ್ದಾರೆ.
ಈ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು ಟೀಂ ಅಣ್ಣಾ ಸದಸ್ಯ...











Click it and Unblock the Notifications