ಉತ್ತರ ಪ್ರದೇಶ ನಾಲ್ಕು ಹೋಳು ಮಾಡಲು ಅಸೆಂಬ್ಲಿ ಅಂಗೀಕಾರ

Mayawati
ಲಖ್ನೋ, ನ.21: ಉತ್ತರಪ್ರದೇಶ ರಾಜ್ಯವನ್ನು ನಾಲ್ಕು ಭಾಗಗಳಾಗಿ ವಿಂಗಡಿಸುವ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರ ಸಿಕ್ಕಿದೆ. ಈ ಮೂಲಕ ಬಿಎಸ್ ಪಿ ಅಧಿನಾಯಕಿ ಮುಖ್ಯಮಂತ್ರಿ ಮಾಯಾವತಿಗೆ ಭರ್ಜರಿ ಜಯ ದೊರೆಕಿದ್ದಂತಾಗಿದೆ.

ಮಾಯಾವತಿ ಸಚಿವ ಸಂಪುಟ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಿದ ಮೇಲೆ, ಈ ಬಗ್ಗೆ ಚರ್ಚೆ ನಡೆಸಲು ಚಳಿಗಾಲದ ಅಧಿವೇಶನದಲ್ಲಿ ಸೂಕ್ತ ವೇದಿಕೆ ನಿರ್ಮಾಣವಾಗಿತ್ತು. ಆದರೆ,ಧ್ವನಿಮತದ ಮೂಲಕ ಉತ್ತರ ಪ್ರದೇಶ ವಿಂಗಡನೆಗೆ ಒಪ್ಪಿಗೆ ಸಿಕ್ಕಿದೆ ಎಂದು ಘೋಷಣೆಯಾಗುತ್ತಿದ್ದಂತೆ ಅಸೆಂಬ್ಲಿಯನ್ನು ಮುಂದೂಡಬೇಕಾಯಿತು.

ಬಿಜೆಪಿ, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಾಯಕರು ಮಾಯಾವತಿ ರಾಜೀನಾಮೆಗೆ ಒತ್ತಾಯಿಸಿ, ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು. ವಿಧೇಯಕಕ್ಕೆ ಅಂಗೀಕಾರ ದೊರೆತ ಬೆನ್ನಲ್ಲೇ ಕೇಂದ್ರ ಸರ್ಕಾರಕ್ಕೆ ವಿಧೇಯಕರ ಪ್ರತಿಯನ್ನು ಸಲ್ಲಿಸಲು ಮಾಯಾವತಿ ಸರ್ಕಾರ ಮುಂದಾಗಿದೆ.

ಕೇಂದ್ರ ಸರ್ಕಾರ ಮಾಯಾವತಿ ಮಂಡಿಸಿರುವ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಿದರೆ ಮಾತ್ರ ವಿಧೇಯಕ ಜಾರಿಗೆ ಬರಲಿದೆ.

ಪೂರ್ವಾಂಚಲ್ ಅಥವಾ ಪೂರ್ವ ಉತ್ತರ ಪ್ರದೇಶ, ಕೇಂದ್ರ ಉತ್ತರ ಪ್ರದೇಶ ಅಥವಾ ಅವಧ್ ಪ್ರದೇಶ, ಹರಿತ್ ಪ್ರದೇಶ ಹಾಗೂ ಬುಂದೆಲ್ ಖಂಡ್ ಎಂದು ಉತ್ತರ ಪ್ರದೇಶವನ್ನು ನಾಲ್ಕು ಭಾಗಗಳಾಗಿ ವಿಂಗಡಿಸುವ ಯೋಜನೆಯನ್ನು ಮಾಯಾವತಿ ಹಾಕಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+