ಗಡ್ಕರಿ ಆಫರ್ ನಿರಾಕರಿಸಿದ ಬಿ ಎಸ್ ಯಡಿಯೂರಪ್ಪ

Yeddyurappa meets Nitin Gadkari
ನವದೆಹಲಿ, ನ.21: ವೈಷ್ಣೋದೇವಿ ಪ್ರವಾಸ ನಿರತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಕೆಲಕಾಲ ಮಹತ್ವದ ಮಾತುಕತೆ ನಡೆಸಿದ್ದಾರೆ.

ಶನಿವಾರ ಸಂಜೆ ನಿಗದಿಯಂತೆ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಬಳ್ಳಾರಿ ಉಪ ಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸಭಾ ಸದಸ್ಯ ಅರುಣ್ ಜೇಟ್ಲಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಡಿವಿಎಸ್ ಗೆ ಯಡ್ಡಿ ಅಭಯ: ಮಾತುಕತೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಡಿವಿ ಸದಾನಂದ ಗೌಡರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನನ್ನ ಬೆಂಬಲಗು ಯಾವುದೇ ಭಿನ್ನಮತ ಚಟುವಟಿಕೆ ನಡೆಸುವುದಿಲ್ಲ. ಸರ್ಕಾರ ಬೀಳಿಸುವುದು, ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಸುವ ಕಾರ್ಯಕ್ಕೆ ನಾವು ಮುಂದಾಗುವುದಿಲ್ಲ ಎಂದು ಅಭಯ ನೀಡಿದ್ದಾರೆ.

ಯಡಿಯೂರಪ್ಪ ಅವರ ಈ ಅಭಯದಿಂದ ಸಂತಸಗೊಂಡ ಗಡ್ಕರಿ ಸಾಹೇಬ್ರು, ನಿಮ್ಮ ಮುಂದಿನ ಭವಿಷ್ಯ ಏನು? ನಿಮಗೆ ನನ್ನ ಟೀಮ್ ನಲ್ಲಿ ಸ್ಥಾನ ಬೇಕೆ? ರಾಜ್ಯಾಧ್ಯಕ್ಷ ಪದವಿ ಬೇಕೆ? ಅಥವಾ ಮತ್ತೇನಾದರೂ ಬಯಸಿದ್ದೀರಾ? ಎಂದು ಗಡ್ಕರಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಉತ್ತರಿಸಿದ ಯಡಿಯೂರಪ್ಪ ತಾಯಿ ವೈಷ್ಣೋದೇವಿ ಹೇಳಿದಂತೆ ಕೇಳುತ್ತೇನೆ. ಸದ್ಯಕ್ಕೆ ಯಾವುದೇ ಪದವಿಯ ಆಸೆ ನನಗಿಲ್ಲ ಎಂದು ತಮ್ಮ ಯಾತ್ರೆ ಮುಂದುವರೆಸಿದ್ದಾರೆ.

ನ.21ರಂದು ಬಳ್ಳಾರಿಗೆ ಆಗಮಿಸಲಿರುವ ಯಡಿಯೂರಪ್ಪ ಅವರು ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪ ಪರ ಪ್ರಚಾರ ನಡೆಸಲು ವೇದಿಕೆ ಸಜ್ಜಾಗಿದೆ. ಪಕ್ಷೇತರ ಅಭ್ಯರ್ಥಿ ಶ್ರೀರಾಮುಲುಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಯಡಿಯೂರಪ್ಪ ಭವಿಷ್ಯ ನುಡಿದಿದ್ದರು. ಆದರೆ, ಯಡಿಯೂರಪ್ಪ ಬಳ್ಳಾರಿಗೆ ಹೋಗುವ ಬಗ್ಗೆ ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ. ಹೆಚ್ಚಿನ ವಿವರಗಳಿಗೆ ಕಾದು ನೋಡಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+