ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಮೀನು ತಿರಸ್ಕೃತ: ಶ್ರೀರಾಮುಲು ಚುನಾವಣೆಯಿಂದ ರೆಡ್ಡಿ ಬಹುದೂರ

By Srinath
|
Google Oneindia Kannada News

reddy-bail-plea-rejected-to-stay-in-jail-for-long
ಹೈದರಾಬಾದ್, ನ.18: ತಮ್ಮ ನೆಚ್ಚಿನ ಸಂಗಾತಿ ಶ್ರೀರಾಮುಲುರನ್ನು ಚುನಾವಣೆ ಕಣಕ್ಕಿಳಿಸಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕೋರ್ಟಿನಿಂದ ಜಾಮೀನು ಪಡೆದು ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವ ಆಸೆ ಕಮರಿಹೋಗಿದೆ. ಇದರಿಂದಾಗಿ ರಾಮುಲು ಮೊದಲ ಬಾರಿಗೆ ತಮ್ಮ ಸಾರಥಿಯ ಅನುಪಸ್ಥಿತಿಯಲ್ಲಿ ಚುನಾವಣೆ ಎದುರಿಸಬೇಕಾಗಿದೆ. ಜಾಮೀನು ಪಡೆಯುವ ನಿಟ್ಟಿನಲ್ಲಿ ಗುರುವಾರ ರೆಡ್ಡಿಗೆ ನಿರ್ಣಾಯಕ ದಿನವಾಗಿತ್ತು. ಆದರೆ ಸಿಬಿಐ ವಿಶೇಷ ನ್ಯಾಯಾಲಯ ಸತತ ಮೂರನೇ ಬಾರಿಗೆ ಜಾಮೀನು ನಿರಾಕರಿಸಿದೆ.

ಇದರಿಂದಾಗಿ ಗಣಿಧಣಿ ಮತ್ತು ಅವರ ಬಾವ ಜಾಮೀನು ಪಡೆಯುವ ಕೊನೆಯ ಅವಕಾಶವನ್ನೂ ಕಳೆದುಕೊಂಡಿದ್ದು, ಮುಂದಿನ ತೀರ್ಪಿನವರೆಗೆ ಜೈಲಿನಲ್ಲೇ ಇರಬೇಕಾಗಿದೆ. ಓಬಳಾಪುರಂ ಗಣಿ ಅಕ್ರಮದಲ್ಲಿ ಇವರಿಬ್ಬರು ಪ್ರಭಾವ ಬೀರಿ ಸಾಕ್ಷಿ ನಾಶಪಡಿಸುವ ಸಾಧ್ಯತೆಗಳಿವೆ ಎಂಬ ಸಿಬಿಐ ವಾದವನ್ನು ನ್ಯಾಯಾಧೀಶರು ಒಪ್ಪಿಕೊಂಡರು. ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬಂಧಿತರಾದ ಓಎಂಸಿ ಮಾಲೀಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರ ಜಾಮೀನು ಅರ್ಜಿಯನ್ನೂ ಇದೇ ವೇಳೆ ತಿರಸ್ಕರಿಸಿದೆ.

ಸೆ. 5 ರಂದು ಬೆಳಗಿನ ಜಾವ ರೆಡ್ಡಿ ದ್ವಯರನ್ನು ಸಿಬಿಐ ಬಂಧಿಸಿತ್ತು. ಈ ನಡುವೆ 6 ದಿನಗಳ ಕಾಲ ಆರೋಪಿಗಳಿಬ್ಬರನ್ನೂ ತನ್ನ ವಶಕ್ಕೆ ತೆಗೆದುಕೊಂಡಿದ್ದ ಸಿಬಿಐ ಮತ್ತೆ ಅವರನ್ನು ತನ್ನ ವಶಕ್ಕೆ ನೀಡಬೇಕೆಂದು ಸಿಬಿಐ ಹೈಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಬೇಕಾಗಿದೆ. ಆದಾಗ್ಯೂ ಸಿಬಿಐ ತನ್ನ ವಿಚಾರಣೆಯನ್ನು ತೀವ್ರಗೊಳಿಸಿದ್ದು, ಡಿಸೆಂಬರ್ 4ರಂದು ಸಿಬಿಐ ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಿಸಲಿದೆ.

English summary
A special court Thursday once again dismissed the bail petitions of former Karnataka minister Gali Janardhana Reddy and his brother-in-law Srinivasa Reddy in an illegal mining case. The CBI earlier questioned the accused during their six-day custody in September. The investigating agency's petition, seeking their custody again, is pending in the high court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X