ಕುಡಿತದ ಚಟ, ಜೀವನದಲ್ಲಿ ಜಿಗುಪ್ಸೆ,ನೇಣಿಗೆ ಶರಣು
ಹಿರಿಯೂರು,
ನ.18: ಪ್ರತಿದಿನ ಕುಡಿಯುವ ಚಟವಿದ್ದ ವ್ಯಕ್ತಿಯೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ತಾಲ್ಲೂಕಿನ ದೇವರಕೊಟ್ಟ ಗ್ರಾಮದಲ್ಲಿ ನಡೆದಿದೆ. id="toptextpromo">ಗ್ರಾಮದ
ರಂಗಸ್ವಾಮಿ (55) ಎಂಬುವನಿಗೆ ಯಾವಾಗಲೂ ಕುಡಿಯುವ ಚಟವಿದ್ದು, ಕೂಲಿ ಮಾಡಿ ತಂದ ಹಣವನ್ನೆಲ್ಲಾ ಕುಡಿತಕ್ಕೆ ಉಪಯೋಗಿಸುತ್ತಿದ್ದ. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಗ್ರಾಮದ ತಿಪ್ಪೇಸ್ವಾಮಿ ಎಂಬುವರ ಹೊಲದ ಬಳಿ ಹೊಂಗೆ ಮರಕ್ಕೆ ಪಂಚೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. id='are-slot-1' class='oiad oi-axt oiadv'> id='top-searched-articles'>ಈ
ಬಗ್ಗೆ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ. ಕೆಲವರು ಜೀವನದಲ್ಲಿ ಜಿಗುಪ್ಸೆಗೊಂಡು ಕುಡಿತದ ಚಟಕ್ಕೆ ಬೀಳುತ್ತಾರೆ. ಆದರೆ ರಂಗಸ್ವಾಮಿಗೆ ಕುಡಿತವೇ ಬೇಸರವಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆಯಿಂದ ಗ್ರಾಮಸ್ಥರು ಮೂಕವಿಸ್ಮಿತರಾಗಿದ್ದಾರೆ. (ಒನ್‌ಇಂಡಿಯಾ ಕನ್ನಡ)











Click it and Unblock the Notifications