ಎಚ್ ಡಿ ಬಾಲಕೃಷ್ಣಗೌಡಗೆ ಫುಲ್ ರಿಲೀಫ್, ತನಿಖೆಗೆ ತಡೆ

ಸೆ.30ರಂದು ಎಚ್ ಡಿ ಬಾಲಕೃಷ್ಣಗೌಡರ ವಿರುದ್ಧ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ಬೃಹತ್ ವರದಿ ತಯಾರಿಸಿದ್ದರು. ವಿವಾದಿತ ಲೋಕಾಯುಕ್ತ ಸಹಾಯಕ ಮಹಾ ನಿರ್ದೇಶಕ ಜೀವನ್‌ಕುಮಾರ್ ಗಾಂವ್ಕರ್ ಅವರ ನೇತೃತ್ವದಲ್ಲಿ ತನಿಖೆ ನಡೆಸಿ, ಸುಮಾರು 20,000 ಪುಟಗಳ ವರದಿಯನ್ನು ಲೋಕಾಯುಕ್ತ ನ್ಯಾ. ಸುಧೀಂದ್ರರಾವ್ ಅವರಿಗೆ ನೀಡಾಗಿತ್ತು.
ಕಂದಾಯ ಇಲಾಖೆ, ಆದಾಯ ತೆರಿಗೆ ಇಲಾಖೆ ಮತ್ತು ಬ್ಯಾಂಕುಗಳಿಂದ ಸಾಕಷ್ಟು ಮಾಹಿತಿ ಸಂಗ್ರಹಿಸಲು ಎರಡು ಮೂರು ತಿಂಗಳಾದರೂ ಕಾಲಾವಕಾಶ ಬೇಕು ಎಂದು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಅದರೆ, ಪೊಲೀಸರ ಮನವಿ ಪುರಸ್ಕರಿಸದ ಲೋಕಾಯುಕ್ತ ನ್ಯಾ. ಸುಧೀಂದ್ರರಾವ್, ಪ್ರಕರಣದ ತನಿಖೆಗೆ 8 ವಾರಗಳ ಕಾಲ ತಡೆಯಾಜ್ಞೆ ನೀಡಿದ್ದಾರೆ. 8 ವಾರಗಳ ನಂತರ ಪ್ರಕರಣದ ಮುಂದಿನ ವಿಚಾರಣೆ ನಡೆಸುವ ಸಾಧ್ಯತೆಯಿದೆ.












Click it and Unblock the Notifications