ಕನಕ ಜಯಂತಿ ರಜೆ ವೋಟ್ ಬ್ಯಾಂಕ್ ಗಾಗಿ ಅಲ್ಲ

BN Bache Gowda
ಬೆಂಗಳೂರು, ನ.15: ಕನ್ನಡ ಬಾಷಾ ಬೆಳವಣಿಗೆಗೆ ಕನಕದಾಸರ ಕೊಡುಗೆ ಅಪಾರ. ಕನಕ ಜಯಂತಿಯಂದು ಸರ್ಕಾರಿ ರಜೆ ನೀಡಿರುವುದು ವೋಟ್ ಬ್ಯಾಂಕ್ ರಾಜಕೀಯ ಎಂದು ತಪ್ಪಾಗಿ ಭಾವಿಸಬಾರದು. ಕನಕದಾಸರ ಹಿರಿಮೆ ಗರಿಮೆಯನ್ನು ಕೊಂಡಾಡುವುದು ಮುಖ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ, ಕಾರ್ಮಿಕ ಮತ್ತು ರೇಷ್ಮೆ ಸಚಿವ ಬಿಎನ್ ಬಚ್ಚೇಗೌಡ ಅಭಿಪ್ರಾಯಟ್ಟಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ಜಿಲ್ಲಾಧಿಕಾರಿಯವರ ಕಚೇರಿಯ ಆವರಣದಲ್ಲಿ ಆಯೋಜಿಸಲಾಗಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಸಮಾರಂಭವನ್ನು ಐದು ಅಡಿ ಎತ್ತರದ ಕನಕದಾಸರ ತೈಲ ಚಿತ್ರವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅರ್ಥಗರ್ಭಿತವಾಗಿ ಆಡು ಭಾಷೆಯಲ್ಲಿ ಸುಶ್ರಾವ್ಯ ಕಾವ್ಯಗಳನ್ನು, ಅಮೂಲ್ಯ ಚಿಂತನೆಗಳ ಹೊತ್ತ ಕೀರ್ತನೆಗಳನ್ನು ಹಾಗೂ ಜನಸಾಮಾನ್ಯರ ಒತ್ತಾಸೆಗಳ ಬಣ್ಣಿಸುವ ಒಗಟುಗಳನ್ನು ರಚಿಸಿರುವ ಕನಕದಾಸರ ಅತ್ಯುತ್ತಮ ಕೃತಿಗಳು ಕನ್ನಡ ಭಾಷೆಯನ್ನು ಸಂಪದ್ಭರಿತಗೊಳಿಸಿವೆ ಎಂದು ಬಚ್ಚೇಗೌಡ ಅವರು ವಿವರಿಸಿದರು.

ತಮ್ಮ ದಾಸರ ಪದಗಳಿಂದ ಸಮಾಜ ಸುಧಾರಣೆಯ ಕ್ರಾಂತಿಗೆ ಚಾಲನೆ ನೀಡಿದ ಕನಕದಾಸರು 15ನೇ ಶತಮಾನದಲ್ಲಿಯೇ ಯುದ್ಧಗಳಿಂದ ಆಗುವ ಅನಾಹುತಗಳನ್ನು ಹಾಗೂ ಸಹಬಾಳ್ವೆಯ ಮಹತ್ವವನ್ನು ಜನಸಾಮಾನ್ಯರ ಮನ ಮುಟ್ಟುವಂತೆ ತಿಳಿಹೇಳಿ ಸಾಮಾಜಿಕ ಮೌಲ್ಯವನ್ನು ಎತ್ತಿ ಹಿಡಿದ ಮಹಾನುಭಾವರಾಗಿದ್ದರು ಎಂದು ಸಚಿವರು ಬಣ್ಣಿಸಿದರು.

ರಾಜ್ಯದಲ್ಲಿ ಮೂರನೇ ಅತಿ ದೊಡ್ಡ ಸಮುದಾಯವೆನಿಸಿರುವ ಕುರುಬ ಜನಾಂಗದವರು ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿ, ನಾಡಿಗೆ ಕೀರ್ತಿ-ಗೌರವಗಳನ್ನು ತಂದಿದ್ದಾರೆ ಎಂದ ಅವರು ಹೊಸಕೋಟೆಯಲ್ಲಿ ಕನಕ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀ ಕೆ. ಎಂ. ಕೃಷ್ಣಮೂರ್ತಿ ಅವರು ಕನಕದಾಸರಿಗೆ ನುಡಿ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಶ್ರೀಮತಿ ನಾಗಚಂದ್ರಿಕಾ ಭಟ್ ಮತ್ತು ತಂಡದವರು ಪ್ರಸ್ತುತಪಡಿಸಿದ ಕನಕ ಗೀತೆಗಳು ಎಲ್ಲರ ಮನಸೂರೆಗೊಂಡವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+