ಸುಷ್ಮಾ ಸ್ವರಾಜ್ ಕರೆಸುವ ಅಗತ್ಯವಿಲ್ಲ: ಈಶ್ವರಪ್ಪ

Sushma Swaraj not to campaign for Bellary by election
ಬಳ್ಳಾರಿ, ನ.14: ಕರ್ನಾಟಕ ಬಿಜೆಪಿಯ ದೊಡ್ಡಪ್ಪ ಯಡಿಯೂರು 'ಅಪ್ಪ' ಆಗಲಿ, ರೆಡ್ಡಿಗಳ 'ಅಮ್ಮ' ಸುಷ್ಮಾ ಸ್ವರಾಜ್ ಆಗಲಿ ಬಳ್ಳಾರಿ ಉಪ ಚುನಾವಣೆಯಲ್ಲಿ ಶ್ರೀರಾಮುಲು ಪರ ಪ್ರಚಾರ ಮಾಡುತ್ತಿಲ್ಲ.

ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಪರ ಅಲ್ಲದೆ ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪ ಪರ ಕೂಡಾ ಈ ಇಬ್ಬರು ಪ್ರಭಾವಿ ನಾಯಕರು ಮತಯಾಚನೆ ಮಾಡುತ್ತಿಲ್ಲ ಎಂಬುದು ಗಮನಾರ್ಹ ಸಂಗತಿ.

ಯಡಿಯೂರಪ್ಪ ಬಳ್ಳಾರಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ. ನಾವು ಬಿಡುವುದಿಲ್ಲ ಎಂದು ರಾಜ್ಯಾಧ್ಯಕ್ಷ ಈಶ್ವರಪ್ಪ ಹಾಗೂ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಹೇಳುತ್ತಿದ್ದಾರೆ.

ನ.17ರಂದು ಬಳ್ಳಾರಿಯಲ್ಲಿ ರಾಜ್ಯ ಬಿಜೆಪಿ ನಾಯಕರ ಸಭೆ ನಡೆಯಲಿದ್ದು, ನಂತರ ಯಡಿಯೂರಪ್ಪ ಅವರು ಬಳ್ಳಾರಿಗೆ ಬರಲಿದ್ದಾರೆ ಎಂಬ ವಿಶ್ವಾಸವನ್ನು ಸದಾನಂದ ಗೌಡ ವ್ಯಕ್ತಪಡಿಸಿದ್ದಾರೆ.

ಆದರೆ, ಉಪ ಚುನಾವಣೆಗೆ ರಾಷ್ಟ್ರೀಯ ನಾಯಕರನ್ನು ಕರೆಸುವ ಪ್ರಮೇಯ ಇಲ್ಲ. ರಾಜ್ಯದಲ್ಲಿ ಸಾಮೂಹಿಕ ನಾಯಕತ್ವದ ಅಡಿಯಲ್ಲಿ ಪ್ರಚಾರ ಕಾರ್ಯ ನಡೆಸುತ್ತೇವೆ. ಸುಷ್ಮಾ ಸ್ವರಾಜ್ ಕರೆಸುವ ಅಗತ್ಯ ಇಲ್ಲ ಎಂದು ಖಾರವಾಗಿ ಕೆಎಸ್ ಈಶ್ವರಪ್ಪ ಅವರು ಪ್ರತಿಕ್ರಿಯಿಸಿದ್ದಾರೆ.

ಯಡ್ಡಿ, ಸುಷ್ಮಾ ಬರೋಲ್ಲ ಓಕೆ, ಕರುಣಾಗೆ ರಾಮುಲು ಮೇಲಿಲ್ಲ ಕರುಣಾ ಯಾಕೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+