ಶ್ರೀರಾಮುಲು ಪರ 'ಅಮ್ಮ'ನೂ ಇಲ್ಲ, ಯ.'ಅಪ್ಪ'ನೂ ಇಲ್ಲ

ರೆಡ್ಡಿಗಳ ಪಾಲಿನ 'ಅಮ್ಮ' ಸುಷ್ಮಾಜೀಯಾಗಲಿ, ರಾಜ್ಯ ಬಿಜೆಪಿ ಪಾಲಿಗೆ ದೊಡ್ಡ 'ಅಪ್ಪ' ಯಡಿಯೂರಪ್ಪ ಆಗಲಿ ಪ್ರಚಾರ ಕಾರ್ಯಕ್ಕೆ ಬರತ್ತಿಲ್ಲ ಎಂಬ ಸತ್ಯವನ್ನು ಅರಗಿಸಿಕೊಂಡಿರುವ ರಾಮುಲುಗೆ ಇನ್ನೊಂದು ಶಾಕ್ ಕಾದಿದೆ.
ಗಾಲಿ ಜನಾರ್ದನ ರೆಡ್ಡಿ ಸೋದರ ಕರುಣಾಕರ ರೆಡ್ಡಿ ಕೂಡಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಶ್ರೀರಾಮುಲು ಪ್ರತಿಕ್ರಿಯಿಸಿದ್ದು ಹೀಗೆ...
'ಜನಾರ್ದನ ರೆಡ್ಡಿ ಸಹೋದರ ಕರುಣಾಕರ ರೆಡ್ಡಿ ನನ್ನ ಜೊತೆ ಬರುತ್ತಾರೆಂಬ ವಿಶ್ವಾಸವಿದೆ. ಅವರು ನನ್ನೊಂದಿಗೆ ಬರದಿದ್ದರೂ ಪರವಾಗಿಲ್ಲ ನನ್ನೊಂದಿಗೆ ಜನಾರ್ದನರೆಡ್ಡಿ ಆಶೀರ್ವಾದವಿದ್ದರೆ ಸಾಕು' ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ಬಳ್ಳಾರಿ ತಾಲೂಕಿನ ಚೇಳ್ಳಗುರ್ಕಿ ಗ್ರಾಮದ ದೇವತೆಗೆ ಪೂಜೆ ಸಲ್ಲಿಸಿ ಮತ ಪ್ರಚಾರದಲ್ಲಿ ಪಾಲ್ಗೊಂಡಿದ ಶ್ರೀರಾಮುಲು,ಬಳ್ಳಾರಿಯಿಂದ ಬಿಜೆಪಿಯೇ ಹೊರತು ಬಿಜೆಪಿಯಿಂದ ಬಳ್ಳಾರಿಯಲ್ಲ ಎಂಬುದನ್ನು ಸಾಬೀತುಪಡಿಸುತ್ತೇನೆ.
ಜನನಾಯಕ ಯಡಿಯೂರಪ್ಪ ಅವರ ಆಶೀರ್ವಾದ ನನ್ನ ಮೇಲಿದೆ. ಜೆಡಿಎಸ್ ಬೆಂಬಲಕ್ಕೆ ಚಿರಋಣಿ. ಆದರೆ, ಯಡಿಯೂರಪ್ಪ ಅಗಲಿ, ಕುಮಾರಸ್ವಾಮಿ ಅವರನ್ನಾಗಲಿ ಭೇಟಿ ಮಾಡಿ ಗುಪ್ತ ಸಮಾಲೋಚನೆ ನಡೆಸಿಲ್ಲ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications