ನಾಯ್ಡು ವಿಚಾರಣೆ, ಬತ್ತಿ ಇಟ್ಟವನು ಚಾಲಾಕಿ ಜಗನ್

Jagan Takes on Naidu
ಹೈದರಾಬಾದ್, ನ.14: ತೆಲಂಗಾಣ ವಿಷಯದಲ್ಲಿ ನಾನು 'neutral' ಎಂದು ಹೇಳುತ್ತಿದ್ದ ನಾಯ್ಡು ರೆಡ್ಡಿ ವಿಷ್ಯಕ್ಕೆ ಬಂದ್ರೆ ಮಾತ್ರ 'gear' ಬದಲಿಸಿ ಗುರ್ ಎನ್ನುತ್ತಿದ್ದರು.

ಆಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿಂತೆ ಸಿಬಿಐ ತಂಡಕ್ಕೆ ಚಳ್ಳೆ ಹಣ್ಣು ತಿನ್ನಿಸುತ್ತಾ ಬಂದಿರುವ ಜಗನ್ ಮೋಹನ್ ರೆಡ್ಡಿ ಸ್ಥಿರಾಸ್ತಿಗಳ ಲೆಕ್ಕಾಚಾರ ಇನ್ನೂ ಸಿಕ್ಕಿಲ್ಲ.

ಗಾಲಿ ಜನಾರ್ದನ ರೆಡ್ಡಿ ಹಾಗೂ ವೈಎಸ್ ರಾಜಶೇಖರ ರೆಡ್ಡಿ ಸಂಬಂಧದ ವಿಚಾರಣೆ ಬಗ್ಗೆ ಸ್ಪಷ್ಟನೆ ನೀಡಲು ನ.4ರಂದು ನಾಂಪಲ್ಲಿಯ ಸಿಬಿಐ ಕಚೇರಿಯಲ್ಲಿ ವಿಚಾರಣೆಗೆ ಹೋಗಿದ್ದ ಜಗನ್ ಹೇಳಿದ್ದು ಮಾತ್ರ ನಾಯ್ಡು ಅಕ್ರಮದ ಕಥೆಯನ್ನು, ಈ ರೀತಿ ಸಿಬಿಐಗೆ ಹೊಸ ಟಾರ್ಗೆಟ್ ಹುಡುಕಿ ಕೊಟ್ಟವನು ಜಗನ್.

ಅಕ್ರಮ ಗಣಿಗಾರಿಕೆಯ ಮೂಲ ಚಂದ್ರಬಾಬು ನಾಯ್ಡು ಸರ್ಕಾರ ಎಂದು ಸಿಬಿಐಗೆ ಮನವರಿಕೆ ಮಾಡಿಕೊಟ್ಟ ಜಗನ್ ನಿರಾತಂಕವಾಗಿ ಹೊರ ಬಂದಿದ್ದ.

ಇದಕ್ಕೆ ಪ್ರತಿಕ್ರಿಯಿಸಿದ್ದ ನಾಯ್ಡು 'ಅಕ್ರಮ ಗಣಿಗಾರಿಕೆ ವಿರುದ್ಧ ಟಿಡಿಪಿ ಹೊರಡಿಸಿರುವ ಪುಸ್ತಕದಲ್ಲಿರುವ ಮಾಹಿತಿಯನ್ನು ಕದ್ದು ಸರ್ಕಾರದ ಆದೇಶ ಎಂದು ಸಿಬಿಐಗೆ ಜಗನ್ ನೀಡಿದ್ದಾನೆ. ಚಿನ್ನದ ಕಮೋಡ್ ಬಳಸುವಷ್ಟು ನಾನು ಶ್ರೀಮಂತನಲ್ಲ ಎಂದು ಗಾಲಿ ರೆಡ್ಡಿ ಹಾಗೂ ವೈಎಸ್ ಜಗನ್ ರನ್ನು ಹೀಯಾಳಿಸಿದ್ದರು. ಹೆಚ್ಚಿಗೆ ಆಸ್ತಿ ಇದ್ದರೆ ಗಾಲಿ ರೆಡ್ಡಿ ಹಾಗೂ ಜಗನ್ ಹೆಸರಿಗೆ ಬರೆಯುತ್ತೇನೆ ಎಂದು ನಾಯ್ಡು ಹೇಳಿಕೊಂಡಿದ್ದರು.

ವೈಎಸ್ ರಾಜಶೇಖರ ರೆಡ್ಡಿ ಅಧಿಕಾರಾವಧಿಯಲ್ಲಿ ನಡೆದ ಅಕ್ರಮಗಳನ್ನು ನನ್ನ ತಲೆಗೆ ಕಟ್ಟಲು ಯತ್ನಿಸಲಾಗುತ್ತಿದೆ ಇದಕ್ಕೆ ಸರಿಯಾದ ಉತ್ತರ ನೀಡುತ್ತೇನೆ ಎಂದು ನಾಯ್ಡು ಗುಡುಗಿದ್ದರು.

ಅದರೆ, ವೈಎಸ್ ಜಗನ್ ತಾಯಿ ವಿಜಯಮ್ಮ ಸಲ್ಲಿಸಿದ ಸುಮಾರು 2400 ಪುಟಗಳ PIL ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ನಾಯ್ಡು ಹಾಗೂ ಅವರ ಕುಟುಂಬದ ಮೇಲೆ ತನಿಖೆಗೆ ಆದೇಶಿಸಿದೆ. ಈಗಾಗಲೆ ಆಸ್ತಿ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿರುವ ನಾಯ್ಡು ಕೋರ್ಟ್ ಆದೇಶದಿಂದ ಕಕ್ಕಾಬಿಕ್ಕಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+