ರೆಡ್ಡಿ ಬಂಧನ ವಿಸ್ತರಣೆ, ಆದ್ರೆ ವಿಶೇಷ ಖೈದಿ ಸ್ಟೇಟಸ್

ಆದರೆ, ಅಕ್ರಮ ಗಣಿಗಾರಿಕೆಯ ಪ್ರಮುಖ ಆರೋಪಿಗಳಾದ ರೆಡ್ಡಿ ಅಂಡ್ ರೆಡ್ಡಿ ನ್ಯಾಯಾಂಗ ಬಂಧನದ ಅವಧಿಯನ್ನು ನ.28ರ ತನಕ ವಿಸ್ತರಿಸಿ ಸಿಬಿಐ ನ್ಯಾಯಾಲಯ ಆದೇಶ ಹೊರಡಿಸಿದೆ.
ಚಂಚಲಗುಡ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾ ಗಾಲಿ ಜನಾರ್ದನ ರೆಡ್ಡಿಗೆ ಸತ್ಯಂನ ಬಿ ರಾಮಲಿಂಗರಾಜು ಅವರಿಗೆ ದೊರೆತಂತೆ 'ಎ' ದರ್ಜೆ ಖೈದಿ ಸ್ಥಾನಮಾನ ಸಿಗಲಿದೆ. ಪ್ರತ್ಯೇಕ ಕೊಠಡಿ, ಟಿವಿ ಸೇರಿದಂತೆ ಸಕಲ ಸೌಲಭ್ಯ ದೊರಯಲಿದೆ.
ಈ ಮಧ್ಯೆ ಜನಾರ್ದನ ರೆಡ್ಡಿ ಅವರನ್ನು ಮತ್ತೆ ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ಸಿಬಿಐ ವಿಫಲವಾಗಿದೆ. ರೆಡ್ಡಿ ಆಪ್ತರು, ಆಂಧ್ರದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುತ್ತಾ, ಪ್ರಕರಣವನ್ನು ಜೀವಂತವಾಗಿಟ್ಟುಕೊಂಡಿರುವ ಸಿಬಿಐ ಪರ ವಕೀಲರು, ರೆಡ್ಡಿಯಿಂದಾಗಲಿ, ಮೊನ್ನೆ ವಿಚಾರಣೆಗೆ ಬಂದಿದ್ದ ಕಡಪ ಕಿಂಗ್ ವೈಎಸ್ ಆರ್ ಜಗನ್ ನಿಂದಾಗಲಿ ಯಾವುದೇ ಪ್ರಮುಖ ವಿಷಯ ಹೊರಗೆಡವುವಲ್ಲಿ ವಿಫಲರಾಗಿದ್ದಾರೆ.












Click it and Unblock the Notifications