ಎಡಿಜಿಪಿ ಗಾಂವ್ಕರ್ ಗೆ ಕರೆ ಮಾಡಿದ್ದು ನಿಜ: ದೇವೇಗೌಡ್ರು
ಬೆಂಗಳೂರು,
ನ. 13: ಮಾಜಿ ಪ್ರಧಾನಿ ದೇವೇಗೌಡರು ಶನಿವಾರದ ಪತ್ರಿಕಾಗೋಷ್ಠಿಯಲ್ಲಿ, ತಾವು ಲೋಕಾಯುಕ್ತ ಎಡಿಜಿಪಿ ಆಗಿದ್ದ ಜೀವನ್ ವಿ ಗಾಂವ್ಕರ್ ಅವರಿಗೆ ಕರೆ ಮಾಡಿ ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಬೆದರಿಕೆ ಹಾಕಿಲ್ಲ ಎಂದು ತಿಳಿಸಿರುವ ಅವರು ಲೋಕಾಯುಕ್ತ ಹಗೆತನದ ತನಿಖೆ ನಡೆಸುತ್ತಿದೆ ಎಂದು ಕಿಡಿಕಾರಿದ್ದಾರೆ. id="toptextpromo">"ಒಂದು
ವಾರದ ಹಿಂದೆ ನನ್ನ ಮಗ ಬಾಲಕೃಷ್ಣ ಮನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ದಲಿತ ಜನಾಂಗಕ್ಕೆ ಸೇರಿದ ಪೊಲೀಸ್ ಪೇದೆಯನ್ನು ಆಟೋದಲ್ಲಿ ಬಂದ ಲೋಕಾಯುಕ್ತ ಅಧಿಕಾರಿಗಳು ಯಾವ ಮುನ್ಸೂಚನೆ ನೀಡದೆ ಎತ್ತಿ ಹಾಕಿಕೊಂಡು ಹೋಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪೇದೆಗೆ
2 ಗಂಟೆಗಳ ಕಾಲ ಮಾನಸಿಕ ಚಿತ್ರಹಿಂಸೆ ನೀಡಿ ಬಾಲಕೃಷ್ಣಗೌಡರಿಗೆ ಸಂಬಂಧಪಟ್ಟ ವಿವರಗಳನ್ನು ನಾವು ಹೇಳಿದಂತೆ ನೀನು ಹೇಳಬೇಕು. ಇಲ್ಲವಾದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಬೆದರಿಸಿದ್ದಾರೆ. ಈಗ ಆ ಪೊಲೀಸ್ ಪೇದೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ" ಈ ರೀತಿಯ ಬೆಳವಣಿಗೆ ನನ್ನ ಕರೆಗೆ ಕಾರಣ ಎಂದಿದ್ದಾರೆ.











Click it and Unblock the Notifications