ಲೋಕಾಯುಕ್ತ ಪೊಲೀಸರ ವರ್ಗದ ಹಿಂದೆ ಷಡ್ಯಂತ್ರ : ಹೆಗ್ಡೆ

ಪ್ರಭಾವಿ ವ್ಯಕ್ತಿಗಳ ವಿರುದ್ಧ ನಡೆಯುತ್ತಿರುವ ಲೋಕಾಯುಕ್ತ ತನಿಖೆಯನ್ನು ಸ್ಥಗಿತಗೊಳಸಿ, ತನಿಖೆಗಳ ಹಾದಿ ತಪ್ಪಿಸಬೇಕೆಂದೇ ಈ ವರ್ಗಾವಣೆ ಮಾಡಲಾಗಿದೆ. ಪ್ರಭಾವಿ ವ್ಯಕ್ತಿಗಳ ಷಡ್ಯಂತ್ರ ಈ ಎಲ್ಲ ವರ್ಗಾವಣೆಗಳ ಹಿಂದೆ ಇದೆ ಎಂದು ಹೆಗ್ಡೆಯವರು ಬೆಂಗಳೂರಿನಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.
ಕಳಂಕಿತ ಅರುಣ್ ಚಕ್ರವರ್ತಿಯವರನ್ನು ವರ್ಗಾವಣೆಯಾಗಿರುವ ಪ್ರಣವ್ ಮೋಹಾಂತಿ ಜಾಗಕ್ಕೆ ಕರೆತರಲಾಗಿದೆ. ಜೀವನ್ ಕುಮಾರ್ ಜಾಗಕ್ಕೆ ಅಪರಾಧ ಮತ್ತು ತಾಂತ್ರಿಕ ವಿಭಾಗದ ಹೆಚ್ಚುವರಿ ಡಿಜಿಪಿ ಆಗಿದ್ದ ಎಚ್ಎನ್ ಸತ್ಯನಾರಾಯಣ ರಾವ್ ಅವರನ್ನು ತರಲಾಗಿದೆ. ಅರುಣ್ ಚಕ್ರವರ್ತಿ ವಿರುದ್ಧ ಲೋಕಾಯುಕ್ತರಾಗಿದ್ದಾಗ ಸಂತೋಷ್ ಹೆಗ್ಡೆಯವರೇ ತನಿಖೆಗೆ ಆದೇಶಿಸಿದ್ದರು.
ಇಂಥವರನ್ನು ಲೋಕಾಯುಕ್ತಕ್ಕೆ ತಂದು ಸಾಧಿಸುವುದಾದರೂ ಏನು ಎಂದು ಅವರು ಕಿಡಿ ಕಾರಿದ್ದಾರೆ. ಪ್ರಸ್ತುತ ಅಧಿಕಾರಿ ಸರಿಯಾಗಿ ಕೆಲಸ ಮಾಡದಿದ್ದಾಗ ವರ್ಗಾವಣೆ ಮಾಡಿದರೆ ಅದಕ್ಕೊಂದು ಅರ್ಥವಿರುತ್ತದೆ. ಆದರೆ, ಘಟಾನುಘಟಿಗಳನ್ನು ಬಲೆಗೆ ಕೆಡವಿದಂಥ ದಕ್ಷ ಗಾಂವ್ಕರ್ ಅವರನ್ನು ವರ್ಗಾವಣೆ ಮಾಡಿದ್ದು ಏಕೆ ಎಂದು ಅವರು ಪ್ರಶ್ನಿಸಿದರು.












Click it and Unblock the Notifications