ಯಡ್ಡಿ ಔಟ್, ಜೈಲರ್ ಬ್ಯಾಕ್ ಟು ಪರಪ್ಪನ ಅಗ್ರಹಾರ

ಅ.29 ರಂದು ಲಕ್ಷಿ ನಾರಾಯಣ್ ಅವರನ್ನು ಬಳ್ಳಾರಿಗೆ ವರ್ಗ ಮಾಡಿ ಅವರ ಸ್ಥಾನದಲ್ಲಿ ಲಿಂಗರಾಜು ಎಂಬುವರನ್ನು ಸರ್ಕಾರ ನೇಮಿಸಿತ್ತು. ಈ ವರ್ಗಾವಣೆಯ ಹಿಂದೆ ಯಡಿಯೂರಪ್ಪ ಅವರ ಕೈವಾಡವಿತ್ತು ಎಂದು ಹೇಳಲಾಗಿದೆ.
ತಮ್ಮ ಕಾರ್ಯನಿರ್ವಹಣೆಯಲ್ಲಿ ಕಠಿಣ ನಿಲುವು ತಾಳುತ್ತಿದ್ದ ಲಕ್ಷ್ಮಿನಾರಾಯಣ ಮತ್ತು ಯಡಿಯೂರಪ್ಪ ಅವರ ಬಂಟ ಸಿದ್ಧ ಲಿಂಗಸ್ವಾಮಿ ನಡುವೆ ಆಗಾಗ ಮಾತಿನ ಚಕಮಕಿ ನಡೆಯುತ್ತಿತ್ತು.
ಬೇರೆ ವಿಐಪಿ ಸಂದರ್ಶಕರ ವಿಷಯ ಹಾಗಿರಲಿ ಸ್ವತಃ ಸಿದ್ದಲಿಂಗ ಸ್ವಾಮಿಗೆ 'ನೋ ಎಂಟ್ರಿ' ಬೋರ್ಡ್ ತೋರಿಸಿದ್ದ ಲಕ್ಷ್ಮಿ ನಾರಾಯಣ ಅವರಿಗೆ ತಕ್ಕ ಪಾಠ ಕಲಿಸಲು ಸ್ವಾಮಿ ನಿರ್ಧರಿಸಿದ್ದ.
ಒಂದು ದಿನ ರಾತ್ರಿ ಊಟ ತಡವಾದಾಗ ಯಡಿಯೂರಪ್ಪ ಕೆಂಡಮಂಡಲವಾಗಿದ್ದರು. ಸ್ವಾಮಿ ಮರ್ಮಕ್ಕೆ ತಾಗುವಂತೆ ಬೈದಿದ್ದರು ಎನ್ನಲಾಗಿದೆ. ಇದರ ಪರಿಣಾಮ ಜೈಲರ್ ಲಕ್ಷ್ಮಿನಾರಾಯಣ ಅವರ ಹಠಾತ್ ಎತ್ತಂಗಡಿ.
ಲಕ್ಷ್ಮಿನಾರಾಯಣ ಅವರ ವರ್ಗಾವಣೆಗೆ ಕೋರ್ಟ್ ತಡೆಯಾಜ್ಞೆ ನೀಡದ ಪರಿಣಾಮ, ದಕ್ಷ ಅಧಿಕಾರಿ ಮತ್ತೆ ಪರಪ್ಪನ ಅಗ್ರಹಾರಕ್ಕೆ ಮರಳಿದ್ದಾರೆ. ಅದು ಯಡಿಯೂರಪ್ಪ ನಿರ್ಗಮನದ ನಂತರ.












Click it and Unblock the Notifications