ಫೇಸ್ ಬುಕ್: ರಂಗನಾಥ್ ಫ್ಯಾನ್ಸ್ ಪೇಜ್ ಸೂಪರ್ ಹಿಟ್

HR Ranganath
ಬೆಂಗಳೂರು, ನ.10: ಸುವರ್ಣ 24X7 ಸುದ್ದಿ ವಾಹಿನಿಯ ಮಾಜಿ ಮುಖ್ಯಸ್ಥ, ಹಾಲಿ ಕದಂಬ ಚಾನೆಲ್ ಉಸ್ತುವಾರಿ ಎಚ್ ಆರ್ ರಂಗನಾಥ್ ಅವರ ಫ್ಯಾನ್ಸ್ ಸಂಖ್ಯೆ ಹೆಚ್ಚುತ್ತಲೇ ಇದೆ.

ಕನ್ನಡ ಪತ್ರಕರ್ತರು ಫೇಸ್ ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲ ತಾಣದಲ್ಲಿ ಇಣುಕುವುದು ಮಾಮೂಲಿ. ಅದರಲ್ಲೂ ಟಿವಿ ಮಾಧ್ಯಮದ ಹೆಸರಾಂತ ನಿರೂಪಕರು, ಪತ್ರಕರ್ತರು, ಸಂಪಾದಕರು ಸ್ವಂತ ಫೇಸ್ ಬುಕ್ ಖಾತೆಗಳನ್ನು ಹೊಂದಿದ್ದಾರೆ.

ಆದರೆ, ಸ್ವಂತ ಖಾತೆ ಹೊಂದಿರದ ರಂಗನಾಥ್ ಅವರ ಅಭಿಮಾನಿಯೊಬ್ಬ ಆರಂಭಿಸಿರುವ ಖಾತೆ ಜನಪ್ರಿಯಗೊಳ್ಳುತ್ತಿದೆ. ರಂಗಣ್ಣ ಅವರ ಅಭಿಮಾನಿಗಳು ಇನ್ನೂ ಅವರನ್ನು ಸುವರ್ಣ ವಾಹಿನಿಯ 9 ಗಂಟೆ ವಾರ್ತಾ ಪ್ರಸಾರದ ಗೆಟೆಪ್ ಗುಂಗಿನಲ್ಲೇ ಕಾಣುತ್ತಿದ್ದಾರೆ.

Ranganath HR ಎಂಬ closed group ಅನ್ನು Raghu Hhp ಎಂಬುವರು ಆರಂಭಿಸಿದ್ದರೂ ಅದರಲ್ಲಿ ಕೇವಲ 39 ಜನ ಇದ್ದರು. ಈಗ Ranghanath HR Fans club ಆರಂಭಿಸಿದ ರಘುಗೆ ಲಕ್ ತಿರುಗಿದೆ. ಸುಮಾರು 1,155ಕ್ಕೂ ಅಧಿಕ ಮಂದಿ ರಂಗನಾಥ್ ಅವರ ಖಾತೆಗೆ ಗೆಳೆಯರಾಗಿದ್ದಾರೆ.

ಇನ್ನೊಂದು 9pm show with Ranganth HR- suvarna News 24X7 ಟಿವಿ ಗುಂಪಿನಲ್ಲಿ 423 ಜನ ಇದ್ದು, ಚಟುವಟಿಕೆ ಸ್ಥಗಿತವಾಗಿದೆ.

ರಂಗನಾಥ್ ಖಾತೆ ಕನ್ ಫ್ಯೂಸ್ ಗೆ ಇಲ್ಲಿದೆ ಉತ್ತರ: ನಮಸ್ಕಾರ ನನ್ನ ಹೆಸರು ರಾಘು.ನಾನು ರಂಗನಾಥ್ ಸರ್ ಫ್ಯಾನ್. ಅವರ ಅಭಿಮಾನಿಗಳಿಗಾಗಿ ಫೇಸ್ ಬುಕ್ ನಲ್ಲಿ ಈ community ತೆರೆದಿದ್ದೇನೆ. ರಂಗನಾಥ್.h.r -ಇವರ ಮಾತುಗಳು ಅದ್ಭುತ. ಜನಪರ ಕಾಳಜಿ ಇರುವವರು.ಅವರ ಫ್ಯಾನ್ಸ್ ಗಳಿಗಾಗಿ ಈ community.

ನೀವು ರಂಗಣ್ಣನ ಫ್ಯಾನ್ ಆಗಿದ್ದರೆ ಈ Community ಗೆ Join ಆಗಿ.ಈ community ಯಲ್ಲಿ ರಂಗನಾಥ್ ಸರ್ ಹೆಸರಿನಲ್ಲಿ ಮಾಡುವ ಎಲ್ಲಾ updates community admin ಅಭಿಪ್ರಾಯವಾಗಿರುತ್ತದೆಯೇ ಹೊರತು ಸ್ವತಃ ರಂಗಣ್ಣ ಈ community ಯಲ್ಲಿ ಇರುವುದಿಲ್ಲ... ಎಂದು ಹೇಳಲಾಗಿದೆ.

ರಂಗಣ್ಣನ ಸ್ಥಾನಕ್ಕೆ ಬಂದು ಕುಳಿತಿರುವ ವಿಶ್ವೇಶ್ವರ ಭಟ್ ಅವರ ಗ್ರಾಫ್ ಹೇಗಿದೆ...?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+