ಕೊರಟಗೆರೆಯ ಕೆಎಚ್ಎನ್ ಕುರಂಗ ಹೊಸ ಲೋಕಾಯುಕ್ತ ಸಾಧ್ಯತೆ
ಬೆಂಗಳೂರು,
ನ.10: ನಾಡಿನ ದೊರೆ ಸದಾನಂದ ಗೌಡರು ಕೊನೆಗೂ ಶೇ.100ರಷ್ಟು 'ಶುದ್ಧ ಹಸ್ತ'ರನ್ನು ಪತ್ತೆಹಚ್ಚಿದ್ದಾರೆ. ಲೋಕಾಯುಕ್ತ ಸ್ಥಾನಕ್ಕೆ 'ಅರ್ಹ'ರನ್ನು ನೇಮಕ ಮಾಡುವ ಸಂಬಂಧ ಹಲವು ದಿನಗಳಿಂದ ಇಕ್ಕಟ್ಟಿಗೆ ಸಿಲುಕಿದ್ದ ಸರ್ಕಾರ ಇದೀಗ ಛತ್ತೀಸ್‌ಗಡದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆಎಚ್ಎನ್ ಕುರಂಗ ಅವರ ಹೆಸರನ್ನು ಪ್ರಸಾಪಿಸಿದೆ. (ಕೊರಟಗೆರೆ ಹನುಮಂತಯ್ಯ ನರಸಿಂಹ ಕುರಂಗ ಇವರ ಪೂರ್ಣ ಹೆಸರು) id="toptextpromo">ನ್ಯಾ.
ಸಂತೋಷ ಹೆಗ್ಡೆ ನಿವೃತ್ತಿ ನಂತರ ನೇಮಕಗೊಂಡಿದ್ದ ನ್ಯಾ. ಶಿವರಾಜ ಪಾಟೀಲ್ ಅವರು ಸೊಸೈಟಿಯೊಂದರ ಬೈ ಲಾ ವಿವಾದದಲ್ಲಿ ಸಿಲುಕಿದ ಕಾರಣ, ತೆರವಾದ ಈ ಸ್ಥಾನಕ್ಕೆ ಅರ್ಹರನ್ನು ಹುಡುಕುವಲ್ಲಿ ಸರ್ಕಾರ ಪೇಚಾಟಕ್ಕೆ ಸಿಲುಕಿತ್ತು. ಈಗ, ತುಮಕೂರು ಜಿಲ್ಲೆಯ ಕೊರಟಗೆರೆಯವರಾದ ಕುರಂಗ ಅವರ ಹೆಸರನ್ನು ಲೋಕಾಯುಕ್ತಕ್ಕೆ ಪರಿಗಣಿಸಿದೆ. id='are-slot-1' class='oiad oi-axt oiadv'> id='top-searched-articles'>ಈ
ಸ್ಥಾನಕ್ಕೆ ಮೊದಲು ನ್ಯಾಯಮೂರ್ತಿ ಎಸ್.ಆರ್.ಬನ್ನೂರಮಠ ಅವರ ಹೆಸರನ್ನು ಸರ್ಕಾರ ಸೂಚಿಸಿತ್ತು. ಆದರೆ ಅವರು ಬೈಲಾ ಉಲ್ಲಂಘಿಸಿ ನ್ಯಾಯಾಂಗ ಬಡಾವಣೆಯಲ್ಲಿ ಜಮೀನು ಖರೀದಿ ಮಾಡಿದ್ದಾರೆ ಎಂಬ ವಿವಾದದ ಹಿನ್ನೆಲೆಯಲ್ಲಿ, ಅವರ ಹೆಸರನ್ನು ಇನ್ನೂ ರಾಜ್ಯಪಾಲರು ಅಂತಿಮಗೊಳಿಸಿಲ್ಲ. ಇದೇ ವೇಳೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರ ಹೆಸರೂ ಕೇಳಿಬಂತು. ಆದರೆ ಅವರ ವಿರುದ್ಧವೂ ಇದೇ ಬಗೆಯ ದೂರು ಕೇಳಿಬಂತು.











Click it and Unblock the Notifications