ಕರ್ನಾಟಕ ಲೋಕಾಯುಕ್ತಕ್ಕೆ ಪ್ರಥಮ ದಲಿತ ನ್ಯಾಯಮೂರ್ತಿ?
ಬೆಂಗಳೂರು,
ನ.10: ತುಮಕೂರು ಜಿಲ್ಲೆಯ ಕೊರಟಗೆರೆಯವರಾದ ಕುರಂಗ ಅವರು ರಾಜ್ಯ ಹೈಕೋರ್ಟ್‌ನಲ್ಲಿ 1993ರಿಂದ 2002ರವರೆಗೆ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಹೆಸರು ಅಂತಿಮಗೊಂಡರೆ ರಾಜ್ಯದ ಲೋಕಾಯುಕ್ತ ಸ್ಥಾನಕ್ಕೆ ಏರಿದ ಪ್ರಥಮ ಪರಿಶಿಷ್ಟ ಜಾತಿಯವರು ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. id="toptextpromo">2002ರಲ್ಲಿ
ಛತ್ತೀಸ್‌ಗಡದ ಮುಖ್ಯ ನ್ಯಾಯಮೂರ್ತಿಗಳಾಗಿ ಬಡ್ತಿ ಹೊಂದಿದ ಅವರು 2004ರಲ್ಲಿ ನಿವೃತ್ತರಾದರು. ರಾಜ್ಯ ಹಾಗೂ ಛತ್ತೀಸ್‌ಗಡದ ನ್ಯಾಯಮೂರ್ತಿಗಳಾಗಿದ್ದ ವೇಳೆ ಇವರು ಯಾವುದೇ ರೀತಿಯ ವಿವಾದಕ್ಕೂ ಒಳಗಾಗಿಲ್ಲ ಎಂದು ನ್ಯಾಯಾಂಗದ ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>ನ್ಯಾ.
ಕುರಂಗ ಅವರು ಕ್ರಿಮಿನಲ್ ಪ್ರಕರಣಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ಮಾತ್ರವಲ್ಲದೇ ಛತ್ತೀಸ್‌ಗಡದಲ್ಲಿ ಕೂಡ ಒಳ್ಳೆಯ ಹೆಸರು ಮಾಡಿದ್ದಾರೆ. ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಯಾವುದೇ ಕಪ್ಪು ಚುಕ್ಕೆಯೂ ಅವರ ಮೇಲೆ ಬಂದಿಲ್ಲ. ಯಾವುದೇ ವಿವಾದಕ್ಕೂ ಒಳಗಾಗಲಿಲ್ಲ ಎಂಬುದು ಸಮಾಧಾನಕರ ಸಂಗತಿ.











Click it and Unblock the Notifications