ಡಿಕೆಶಿ Vs ಎಚ್ಡಿಕೆ : ಮಾತಿನ ಮಾರಾಮಾರಿ
ಬೆಂಗಳೂರು,
ನ 10: ಒಕ್ಕಲಿಗ ಸಮುದಾಯದ ಇಬ್ಬರು ಘಟಾನುಘಟಿ ನಾಯಕರುಗಳಾದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್ ನಡುವೆ ವಾಕ್ಸಮರ ತಾರಕಕ್ಕೇರಿದೆ. ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಿದ ಹಾಗೆ ನನ್ನನ್ನೂ ಜೈಲಿಗೆ ಅಟ್ಟುವೆ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಜೈಲಿಗೆ ಹೋಗಲು ಸಿದ್ದ, ನಿಮ್ಮ ರಾಜಕಾರಣ ನೀವು ಮಾಡಿ ನನ್ನ ರಾಜಕಾರಣ ನಾನು ಮಾಡುತ್ತೇನೆ ಎಂದು ಡಿಕೆಶಿ ಸವಾಲೆಸೆದಿದ್ದಾರೆ. id="toptextpromo">ತಪ್ಪು
ಮಾಡಿದವರನ್ನು ಈ ಕುಮಾರಸ್ವಾಮಿ ಜೈಲಿಗೆ ಅಟ್ಟದೆ ಬಿಡುವುದಿಲ್ಲ. ಯಡಿಯೂರಪ್ಪನವರ ಭ್ರಸ್ಟಾಚಾರವನ್ನು ಬಯಲಿಗೆ ಎಳೆದವನು ನಾನು. ಡಿ ಕೆ ಶಿವಕುಮಾರ್ ಅವರ ಹಗರಣಗಳನ್ನು ಹೊರತಂದು ಅವರನ್ನೂ ಜೈಲಿಗೆ ಅಟ್ಟುವೆ. ತಪ್ಪು ಯಾರೇ ಮಾಡಲಿ ಅದು ತಪ್ಪೇ. ಡಿಕೆಶಿಯವರ ಹಗರಣ ಒಂದಲ್ಲ ಎರಡಲ್ಲ. ನೋಡುತ್ತಿರಿ ಅವರನ್ನೂ ಕೃಷ್ಣನ ಜನ್ಮಸ್ಥಾನಕ್ಕೆ ಕಳುಹಿಸುತ್ತೆನೆಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. id='are-slot-1' class='oiad oi-axt oiadv'> id='top-searched-articles'>ಇತ್ತ
ಕನಕಪುರದಲ್ಲಿ ಇದಕ್ಕೆ ಖಾರವಾಗಿ ಉತ್ತರಿಸಿದ ಶಿವಕುಮಾರ್, ರಾಜಕಾರಣ ಮಾಡುವುದು ಪ್ರಶ್ತ್ನೆಯಲ್ಲ. ಯಾವ ರೀತಿ ರಾಜಕಾರಣ ಮಾಡುವುದೆನ್ನುವುದು ಮುಖ್ಯ. ಅಧಿಕಾರ ಇದ್ದಾಗ ಪ್ರಾಮಾಣಿಕವಾಗಿ ಜನಸೇವೆ ಮಾಡಬೇಕು. ರಾಜಕಾರಣ ಮಾಡುವುದಾದರೆ ತಮ್ಮ ಸಮಾನರಲ್ಲಿ ರಾಜಕೀಯ ಮಾಡಬೇಕು. ಮಾಜಿ ಮುಖ್ಯಮಂತ್ರಿಯೊಬ್ಬರು ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳಿದ್ದಾರೆ. ನಾನು ಜೈಲಿಗೆ ಹೋಗಲು ಸಿದ್ದ. ಅವರ ಈ ಹೇಳಿಕೆ ಬರೀ ಬಾಯಿ ಚಪಲದ ಹೇಳಿಕೆ ಆಗದಿರಲಿ ಎಂದು ನಾನು ಆಶಿಸುತ್ತೇನೆ ಎಂದು ಡಿ ಕೆ ಶಿವಕುಮಾರ್ ಸವಾಲೆಸಿದ್ದಾರೆ.











Click it and Unblock the Notifications