ಶ್ರೀರಾಮುಲು ಹಾರಾಟ, ತಾಯಿ ಸುಷ್ಮಾ ಎಲ್ಲಿದ್ದೀಯಮ್ಮಾ!?: ಬಿಜೆಪಿ ಆರ್ತನಾದ

ಶ್ರೀರಾಮುಲು ಹಾರಾಟ ಕಂಡು 'ಅಮ್ಮಾ ಸುಷ್ಮಾ ಸ್ವರಾಜ್ ಎಲ್ಲಿದ್ದೀಯಮ್ಮಾ!?. ಈ ನಿನ್ನ ಮಕ್ಕಳ ಹಾರಾಟ ಏನಮ್ಮಾ? ಪಕ್ಷದ ಬಗ್ಗೆ ಸ್ವಲ್ಪ ಯೋಚಿಸಮ್ಮಾ' ಎಂದು ಕನವರಿಸುತ್ತಿದ್ದಾರೆ.
ವಾಸ್ತವವಾಗಿ, ತಾಯಿ ಸುಷ್ಮಾ ಸ್ವರಾಜ್ ಅವರು ತಮ್ಮ 'ಮಕ್ಕಳ' ಜತೆಗಿನ 'ಕರುಳುಬಳ್ಳಿಯನ್ನು' ಕಡಿದುಕೊಂಡು ಯಾವುದೋ ಕಾಲವಾಗಿದೆ. ಆದರೂ ಬಳ್ಳಾರಿ ಸೋದರರನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಅವರು ಯತ್ನಿಸಲಿ ಎಂಬ ಹತಾಶ ಭಾವದಲ್ಲಿದ್ದಾರೆ ಬಿಜೆಪಿ ಮಂದಿ. ವರಮಹಾಲಕ್ಷ್ಮಿ ಹಬ್ಬಕ್ಕೆ ಥಯ್ಯಂತ ಬಂದಿಳಿಯುತ್ತಿದ್ದ ತಾಯಿ ಸುಷ್ಮಾ ಸ್ವರಾಜ್ ಅವರನ್ನು 'ಬಳ್ಳಾರಿ ಮಕ್ಕಳು' ಪ್ರಜ್ಞಾಪೂರ್ವಕವಾಗಿ ಮರೆಯಲೆತ್ನಿಸಿದ್ದಾರೆ.
ಬುಧವಾರ ಬೆಳಗ್ಗಿನ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬಳ್ಳಾರಿಯ 'ಹಿರಿಯ ಸೋದರ', ಸದ್ಯ ಹೈದರಾಬಾದಿನ ಚಂಚಲಗೂಡ ಜೈಲಿನಲ್ಲಿ ವಿಶ್ರಮಿಸುತ್ತಿರುವ ಜನಾರ್ದನ ರೆಡ್ಡಿ ಮೊತ್ತೊಮ್ಮೆ ಬಳ್ಳಾರಿ ರಾಜಕೀಯದ ಸೂತ್ರಧಾರನಾಗಿರುವುದು ಸ್ಪಷ್ಟವಾಗಿದೆ. ತಮ್ಮ ಶ್ರೀರಾಮುಲುಗೆ ಬಂಡಾಯದ ಸ್ವಾತಂತ್ರ್ಯ ಕಲ್ಪಿಸಿ, ತಮ್ಮ ತಾಕತ್ತು ಏನು ಎಂಬುದನ್ನು ತೋರಿಸಲು ಪಣ ತೊಟ್ಟಂತಿದೆ.
ಇಂದು ಸ್ವತಂತ್ರ ಅಭ್ಯರ್ಥಿಯಾಗಿ ಶ್ರೀರಾಮುಲು ನಾಮಪತ್ರ ಸಲ್ಲಿಕೆಯಾಗುವುದು ನಿಶ್ಚಿತವಾಗಿದೆ. ರಾಜ್ಯ ರಾಜಕೀಯ ಬೆಳವಣಿಗೆಗಳ ಲೊಕೇಶನ್ ಸದ್ಯಕ್ಕೆ ಬಳ್ಳಾರಿಗೆ ಶಿಫ್ಟ್ ಆಗಿದೆ.












Click it and Unblock the Notifications