ಯಡ್ದಿಗೆ ಮುಂದೈತೆ ಮಾರಿ ಹಬ್ಬ ಎಂದ ವಿಪಕ್ಷಗಳು

ಆದರೆ, ಇದು ತಾತ್ಕಾಲಿಕ ರಿಲೀಫ್ ಅಷ್ಟೇ ಯಡಿಯೂರಪ್ಪ ಅವರ ಅಕ್ರಮಗಳು ಲೆಕ್ಕಕ್ಕೆ ಸಿಗುವುದಲ್ಲ. ಮತ್ತೆ ಶಿಕ್ಷೆ ಅನುಭವಿಸುತ್ತಾರೆ. ಅವರನ್ನು ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿಲ್ಲ. ಜಾಮೀನು ಸಿಕ್ಕ ತಕ್ಷಣ ಸಂಭ್ರಮಾಚರಣೆಯಲ್ಲಿ ತೊಡಗುವುದು ಎಷ್ಟು ಸರಿ? ಮತ್ತೆ ಯಡಿಯೂರಪ್ಪ ಅವರು ಜೈಲುಪಾಲಾಗುವ ದಿನಗಳು ದೂರವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ಯಡಿಯೂರಪ್ಪ ಇಸ್ ಡೇಂಜರ್: ಜೈಲಿನದ್ದುಕೊಂಡೇ ಸರ್ಕಾರವನ್ನು ನಡೆಸುತ್ತಿದ್ದ ಯಡಿಯೂರಪ್ಪ ಅವರು ಹೊರಗೆ ಬಂದ ಮೇಲೆ ಹಿಡಿಯುವುದು ಕಷ್ಟ. ಲೋಕಾಯುಕ್ತ ನೇಮಕಾತಿಯಲ್ಲೇ ಕೈ ಆಡಿಸಿ ರಾಜ್ಯಪಾಲರಿಗೆ ತಲೆನೋವು ತಂದಿರುವ ಯಡಿಯೂರಪ್ಪ ಅವರು ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ನಾಶಪಡಿಸುವುದಿಲ್ಲ ಎಂದು ನಂಬುವುದು ಕಷ್ಟ.
ಉಳಿದ ಪ್ರಕರಣಗಳು ಜಾರಿಯಲ್ಲಿರುವಾಗಲೇ ಜಾಮೀನು ನೀಡಿ ಹೊರಗೆ ಕಳಿಸುವುದು ಯಾಕೋ ಸರಿ ಕಾಣುವುದಿಲ್ಲ. ರಾಜಕೀಯ ದ್ವೇಷದ ಆಟ ಇನ್ಮುಂದೆ ಆರಂಭವಾಗಲಿದೆ ಎಂದು ಜೆಡಿಎಸ್ ವಕ್ತಾರ ವೈಎಸ್ ವಿ ದತ್ತಾ ಅಭಿಪ್ರಾಯಪಟ್ಟಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ದೂರು ದಾಖಲಿಸಿದ ಸಿರಾಜಿನ್ ಬಾಷಾ ಹಾಗೂ ಬಾಲರಾಜ್ ಅವರಿಗೆ ಸೂಕ್ತ ರಕ್ಷಣೆಯ ಅಗತ್ಯವಿದೆ. ಅವರಿಗೆ ಭ್ರಷ್ಟಾಚಾರ ವಿರೋಧಿ ಸಂಘಟನೆಗಳು ಬೆಂಬಲ ನೀಡದಿರುವುದು ಬೇಸರದ ಸಂಗತಿ ಎಂದು ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತಾ ಅವರು ವ್ಯಥೆ ವ್ಯಕ್ತಪಡಿಸಿದ್ದಾರೆ.











Click it and Unblock the Notifications